ಕಂಪನಿಯ ಗೌಪ್ಯ ಮಾಹಿತಿ ರವಾನೆ; ಒಬ್ಬನ ಬಂಧನ, ಇಬ್ಬರ ವಿರುದ್ಧ ಎಫ್ಐಆರ್

Prasthutha|

ಬೆಂಗಳೂರು:  ಶಾಲಾ ಮಕ್ಕಳ ಪುಸ್ತಕ ವಿತರಿಸುವ ಸುಭಾಷ್ ಎಂಟರ್ಪ್ರೈಸಸ್ ಕಂಪನಿಯ ಗೌಪ್ಯ ಮಾಹಿತಿಯನ್ನು ಬೇರೆ ಕಂಪನಿಗೆ ನೀಡುತ್ತಿದ್ದ ಆರೋಪದಡಿ ಓರ್ವನನ್ನು ಜಗಜೀವನ್ ರಾಮನಗರ ಪೊಲೀಸರು ಬಂಧಿಸಿದ್ದಾರೆ.

- Advertisement -

ಸುಭಾಷ್ ಎಂಟರ್ಪ್ರೈಸಸ್ ಮಾಲೀಕ‌ ನಾಗೇಶ್ ನೀಡಿದ ದೂರಿನ‌ ಮೇರೆಗೆ ಕಂಪನಿಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ನನ್ನು ಬಂಧಿಸಲಾಗಿದೆ.‌ ಮೋಹನ್ ಮಾಡಿದ ಕೃತ್ಯದಿಂದ ಸುಭಾಷ್ ಎಂಟರ್ಪ್ರೈಸಸ್ಗೆ ಬರಬೇಕಿದ್ದ ಆರ್ಡರ್ ಗಳು ರದ್ದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಲಾ ಮಕ್ಕಳ ಪುಸ್ತಕ ವಿತರಣೆಯಲ್ಲಿ ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿರುವ ಸುಭಾಷ್ ಎಂಟರ್ಪ್ರೈಸಸ್ ಕಂಪನಿಯಲ್ಲಿ ಮೋಹನ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇ-ಮೇಲ್ ಮೂಲಕ ಸುಭಾಷ್ ಎಂಟರ್ಪ್ರೈಸಸ್ ಕಂಪನಿಗೆ ಬಂದಿದ್ದ ಆರ್ಡರ್ ಹಾಗೂ ರಿಯಾಯಿತಿ ದರ, ಬೆಲೆ ಸೇರಿದಂತೆ ಇನ್ನಿತರ ಗೌಪ್ಯ ಮಾಹಿತಿಗಳನ್ನು ಸಪ್ನಾ ಬುಕ್ ಹೌಸ್ ಸಿಇಒ‌‌ ನಿಜೇಶ್ ಶಾ ಅವರಿಗೆ ಕಳುಹಿಸುತ್ತಿದ್ದ ಎನ್ನಲಾಗಿದೆ.

- Advertisement -

ಕಾನೂನುಬಾಹಿರವಾಗಿ ಗೌಪ್ಯ ಮಾಹಿತಿ ತರಿಸಿಕೊಂಡ ಆರೋಪದಡಿ ನಿಜೇಶ್ ಶಾ, ಕಂಪನಿಯ ಸಿಬ್ಬಂದಿ ಮಧುಕರ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

Join Whatsapp