ಮಾರಕಾಸ್ತ್ರಗಳಿಂದ ಕೊಚ್ಚಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮಿ ಕೊಲೆ: ಆಪ್ತ ಸಹಾಯಕ ಅರೆಸ್ಟ್

Prasthutha|

ಮೈಸೂರು: ಸಿದ್ಧಾರ್ಥನಗರ ಸಮೀಪ ಬನ್ನೂರು ರಸ್ತೆಯಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (90) ಅವರನ್ನು ಸೋಮವಾರ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

- Advertisement -

ಸ್ವಾಮೀಜಿ ಆಪ್ತ ಸಹಾಯಕ ರವಿ(60) ಎಂಬಾತನಿಂದ ಕೃತ್ಯ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನಾ ಸ್ಥಳಕ್ಕೆ ನಜರ್ ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ, ಆಸ್ತಿ ವಿಚಾರದಲ್ಲಿ ಇದ್ದ ತಕರಾರು ಕಾರಣ ಎನ್ನಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ನಜರ್ಬಾದ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp