ಕಂಗನಾಗೆ ಕಪಾಳ ಮೋಕ್ಷ: ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್‌ ಬೆಂಬಲಿಸಿ ರೈತರ ಮೆರವಣೆಗೆ

Prasthutha|

ಚಂಡೀಗಢ: ಸಂಸದೆ ಮತ್ತು ನಟಿ ಕಂಗನಾಗೆ ಕಪಾಳ ಮೋಕ್ಷ ನಡೆಸಿದ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್‌ಗೆ ಬೆಂಬಲ ಸೂಚಿಸಿ ಸಂಯುಕ್ತ ಕಿಸಾನ್ ಮೋರ್ಚಾ, ದಿ ಕಿಸಾನ್ ಮಜುಂದಾರ್ ಮೋರ್ಚಾ ಸೇರಿ ಹಲವು ರೈತ ಸಂಘಟನೆಗಳ ಸದಸ್ಯರು ಪಂಜಾಬ್‌ನ ಮೊಹಾಲಿಯಲ್ಲಿ ಮೆರವಣಿಗೆ ನಡೆಸಿದ್ದಾರೆ.ಮೊಹಾಲಿ ಆಂಬ್ ಸಾಹಿಬ್ ಗುರುದ್ವಾರದಿಂದ ಮೆರವಣಿಗೆ ಆರಂಭವಾಗಿದೆ. ಭಾರಿ ಭದ್ರತೆ ಕೈಗೊಳ್ಳಲಾಗಿದೆ.

- Advertisement -

ಘಟನೆ ಕುರಿತಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಮಹಿಳಾ ಕಾನ್‌ಸ್ಟೆಬಲ್ ಕಪಾಳಮೋಕ್ಷ ಮಾಡಿದ್ದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಬೇಕು. ಮಹಿಳಾ ಕಾನ್‌ಸ್ಟೆಬಲ್‌ಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ. ನಟಿ
ಪಂಜಾಬ್ ಜನರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದಕ್ಕೆ ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಚಂಡೀಗಢ ವಿಮಾನನಿಲ್ದಾಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಕೌರ್‌, ನಟಿ ಕಂಗನಾ ಹಿಂದೆ ರೈತರ ಪ್ರತಿಭಟನೆಯ ಕುರಿತು ನೀಡಿದ ಹೇಳಿಕೆಗಳಿಂದ ರೋಸಿಹೋಗಿ ನಟಿಗೆ ಕಪಾಳ ಮೋಕ್ಷ ಮಾಡಿದ್ದರು.

Join Whatsapp