ಟ್ರಾಫಿಕ್ ಜಾಮ್| ಎಮ್ಮೆಗಳ ವಿರುದ್ಧ ದೂರು ನೀಡಿದ ಟೆಕ್ಕಿಗಳು!

Prasthutha|

ಬೆಂಗಳೂರು: ನಗರದ ರಸ್ತೆಯಲ್ಲಿ ಎಮ್ಮೆಗಳು ತೊಂದರೆ ಕೊಡುತ್ತಿವೆ ಎಂದು ಸಾಫ್ಟ್‌ವೇರ್ ಇಂಜಿನಿಯರ್ ಗಳು ದೂರು ನೀಡಿದ ಘಟನೆ ನಡೆದಿದೆ.

- Advertisement -

ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಬೆಳಿಗ್ಗೆ ಆಫೀಸ್​ಗೆ ಹೋಗುವಾಗ ನಗರದ ಕಸವನಹಳ್ಳಿ ರಸ್ತೆಯಲ್ಲಿ ಪ್ರತಿನಿತ್ಯ ಎಮ್ಮೆಗಳು ಸರತಿ ಸಾಲಿನಲ್ಲಿ ಸಾಗುತ್ತವೆ. ಇದರಿಂದ ದಿನನಿತ್ಯ 45 ನಿಮಿಷ ಟ್ರಾಫಿಕ್ ಜಾಮ್ ಆಗುತ್ತಿದ್ದು, ಟೆಕ್ಕಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಬಹುರಾಷ್ಟ್ರೀಯ ಕಂಪನಿಯ ಟೆಕ್ಕಿಗಳು ಕಳೆದ 6-7 ತಿಂಗಳಿಂದ ಎಮ್ಮೆ ಸಮ್ಯಸೆಯಿಂದ‌ ಟ್ರಾಫಿಕ್ ಜಾಮ್ ಆಗಿ ಆಫೀಸ್​ಗೆ ನಿತ್ಯ ತಡವಾಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಟೀಟ್ವರ್​ನಲ್ಲಿ ಪಶುಸಂಗೋಪನಾ ಇಲಾಖೆ, ಸಂಚಾರ ಪೊಲೀಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.

Join Whatsapp