ಪಾರ್ಸೆಲ್ ನಲ್ಲಿ ಡ್ರಗ್ಸ್ ಪತ್ತೆ ಬೆನ್ನಲ್ಲೇ ಟಫ್ ರೂಲ್ಸ್: ಪರಪ್ಪನ ಅಗ್ರಹಾರದಲ್ಲಿ ಪಾರ್ಸೆಲ್ ಗೆ ಅನುಮತಿ ಕಡ್ಡಾಯ

Prasthutha|

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕೊರಿಯರ್ ಪಾರ್ಸೆಲ್ ಕಳುಹಿಸಲು ಹಾಗೂ ಪಡೆಯಲು ಅಧೀಕ್ಷಕರ ಅನುಮತಿ ಕಡ್ಡಾಯಗೊಳಿಸಲಾಗಿದೆ.

- Advertisement -

ಇತ್ತೀಚೆಗೆ ಬಂದಿದ್ದ ಕೋರಿಯರ್ ಪಾರ್ಸೆಲ್ ನಲ್ಲಿ ಡ್ರಗ್ಸ್ ಪತ್ತೆಯಾಗಿರುವ ಪ್ರಕರಣದ ಬೆನ್ನಲ್ಲೇ ಜೈಲಿನಲ್ಲಿ ಹೊಸ ನಿಯಮ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ‘ಅನುಮತಿ ಇಲ್ಲದ ಕೊರಿಯರ್ ಪಾರ್ಸೆಲ್ ಗಳನ್ನು ಜೈಲಿನ ಸಿಬ್ಬಂದಿ ಸ್ವೀಕರಿಸಬಾರದು’ ಎಂದು ಜೈಲಿನ ಮುಖ್ಯ ಅಧೀಕ್ಷಕರು ಸಿಬ್ಬಂದಿಗೆ ಸೂಚಿಸಿದ್ದಾರೆ

- Advertisement -

‘ಯಾವುದೇ ಪಾರ್ಸೆಲ್ ಪಡೆಯಬೇಕಾದರೆ, ವಾರದ ಮುಂಚೆಯೇ ಜೈಲಿನ ಮುಖ್ಯ ಅಧೀಕ್ಷಕರಿಂದ ಅನುಮತಿ ಪಡೆಯಬೇಕು. ಪಾರ್ಸೆಲ್ ನಲ್ಲಿ ಏನಿರುತ್ತೆ? ಎಂಬುದನ್ನು ತಿಳಿಸಬೇಕು. ಅನುಮತಿ ಪಡೆಯದಿದ್ದರೆ, ಪಾರ್ಸೆಲ್ ವಾಪಸು ಕಳುಹಿಸಲಾಗುವುದು. ಈ ಬಗ್ಗೆ ಕೈದಿಗಳು, ಸಂಬಂಧಿಕರು ಹಾಗೂ ಇತರರಿಗೆ ತಿಳಿಸಬೇಕು’ ಎಂದು ಅವರು ತಿಳಿಸಿದ್ದಾರೆ.

Join Whatsapp