ಮಂಗಳೂರು: ಮುಂದುವರಿದ ಧಾರಾಕಾರ ಮಳೆ; ಸಮಸ್ತ ಅಂಗೀಕೃತ ಮದ್ರಸಾಗಳಿಗೆ ರಜೆ

Prasthutha|

ಮಂಗಳೂರು: ದ.ಕ. ಜಿಲ್ಲೆಯಾದ್ಯಂತ  ಮುಂದುವರಿದ ನಿರಂತರ ಮಳೆಯ ಕಾರಣ  ಜಿಲ್ಲಾಡಳಿತ  ಶಾಲಾ-ಕಾಲೇಜುಗಳಿಗೆ ರಜೆ  ಘೋಷಿಸಿದೆ.

- Advertisement -

ಈ ಹಿನ್ನೆಲೆಯಲ್ಲಿ ಸಮಸ್ತ ಅಂಗೀಕೃತ  ಮದ್ರಸಾಗಳಿಗೆ ಇಂದು ರಜೆ ನೀಡಲಾಗಿದೆ ಎಂದು ದ.ಕ.ಜಿಲ್ಲಾ ಜಂಇಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್ಮೆಂಟ್ ಅಸೋಸಿಯೇಷನ್ ಇದರ ಅಧ್ಯಕ್ಷರು/ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಳೆ ನಿಮಿತ್ತ ನೀಡಲಾಗಿರುವ ರಜೆಯೊಂದಿಗೆ ಬಕ್ರೀದ್  ಹಬ್ಬದ  ರಜೆಯನ್ನೂ ಮುಂದುವರಿಸಲಾಗುವುದು ಎಂದು ಮಂಗಳೂರಿನ ಅಲ್ ಮದ್ರಸತುಲ್  ಅಝ್ಹರಿಯಾ ಆಡಳಿತ ಮಂಡಳಿ ತಿಳಿಸಿದೆ.

Join Whatsapp