ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಮತ್ತೆ ಇಬ್ಬರು ಭಾರತೀಯರು ಮೃತ

Prasthutha|

ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ ಸೇನೆಯಿಂದ ನೇಮಕಗೊಂಡಿದ್ದ ಮತ್ತೆ ಇಬ್ಬರು ಭಾರತೀಯರು ಮೃತರಾಗಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇದನ್ನು ದೃಢಪಡಿಸಿದೆ.

- Advertisement -

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ರಷ್ಯಾದ ಸೇನೆಯಿಂದ ನೇಮಕಗೊಂಡ ಇಬ್ಬರು ಭಾರತೀಯರು ಇತ್ತೀಚೆಗೆ ಹತ್ಯೆಗೀಡಾದ್ದಾರೆ ಎಂದು ಹೇಳಲು ನಾವು ವಿಷಾದಿಸುತ್ತೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಈ ಮೂಲಕ ರಷ್ಯಾದ ಯುದ್ಧದಲ್ಲಿ ಭಾಗಿಯಾಗಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಮೃತ ಭಾರತೀಯರ ಗುರುತು ಇನ್ನೂ ಬಹಿರಂಗವಾಗಿಲ್ಲ.

- Advertisement -

ಮೃತರ ಕುಟುಂಬಗಳಿಗೆ ನಾವು ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಮಾಸ್ಕೋದಲ್ಲಿರುವ ನಮ್ಮ ರಾಯಭಾರ ಕಚೇರಿಯು ರಕ್ಷಣ ಸಚಿವಾಲಯ ಸೇರಿದಂತೆ ರಷ್ಯಾದ ಅಧಿಕಾರಿಗಳಿಗೆ ಮೃತ ದೇಹಗಳನ್ನು ಶೀಘ್ರವಾಗಿ ಮರಳಿಸ ಎಂದು ಸಚಿವಾಲಯ ಒತ್ತಾಯಿಸಿದೆ.

ರಷ್ಯಾದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುವಾಗ ಎಚ್ಚರಿಕೆ ವಹಿಸುವಂತೆ ಸಚಿವಾಲಯವು ಭಾರತೀಯ ಪ್ರಜೆಗಳಿಗೆ ಮತ್ತೊಮ್ಮೆ ಸೂಚನೆ ನೀಡಿದೆ.

Join Whatsapp