ಬೆಂಗಳೂರು ಶೋ ರದ್ದಾದ ಬೆನ್ನಲ್ಲೇ ಹಾಸ್ಯ ಕಲಾವಿದನಿಗೆ ಕೋಲ್ಕತ್ತಾದಿಂದ ಆಹ್ವಾನ

Prasthutha|

ನವದೆಹಲಿ: ಸಂಘಪರಿವಾರದ ಕಿರಿಕ್ ನಿಂದಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ರದ್ದಾದ ಬೆನ್ನಲ್ಲೇ, ಕೋಲ್ಕತ್ತಾದಲ್ಲಿ ಕಾರ್ಯಕ್ರಮ ನಡೆಸುವಂತೆ ಹಾಸ್ಯ ಕಲಾವಿದ ವೀರ್ ದಾಸ್ ಅವರನ್ನು ಟಿಎಂಸಿ ಸಂಸದ ಡೆರೆಕ್ ಒಬ್ರೇನ್ ಅವರು ಆಹ್ವಾನಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಟಿಎಂಸಿ ಪಕ್ಷದ ರಾಜ್ಯಸಭಾ ಸಂಸದ ಡೆರೆಕ್, ನಮಸ್ಕಾರ ವೀರ್ ದಾಸ್ ಅವರೆ. ನೀವು ಕಾರ್ಯಕ್ರಮಕ್ಕೆ ಕೋಲ್ಕತ್ತಾಗೆ ಬನ್ನಿ. ಈ ಚಳಿಗಾಲದಲ್ಲಿ ನೀವು ಇಲ್ಲಿ ಇರಲು ನಾವು ಇಷ್ಟಪಡುತ್ತೇವೆ. ದಯವಿಟ್ಟು ನನಗೆ ಪ್ರತಿಕ್ರಿಯಿಸಿ. ಇದನ್ನು ಮುಂದುವರಿಸೋಣ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ನಡೆಯಬೇಕಿದ್ದ ವೀರ್ ದಾಸ್ ಅವರ ಕಾರ್ಯಕ್ರಮ ಸಂಘ ಪರಿವಾರದ ತಗಾದೆಯಿಂದಾಗಿ ರದ್ದಾಗಿತ್ತು.

Join Whatsapp