ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಒಂದೇ ಕಾರ್ಯಸೂಚಿಯೊಂದಿಗೆ ಒಗ್ಗೂಡುವ ಸಮಯ ಬಂದಿದೆ: ಎಂ.ಕೆ.ಫೈಝಿ

Prasthutha|

ನವದೆಹಲಿ: ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಮೂಲಕ ಭಾರತವು ಪ್ರತಿಪಕ್ಷ ಮುಕ್ತವಾಗಬೇಕು ಎಂದು ಬಿಜೆಪಿ ಬಯಸಿದೆ. ಇದು ಫ್ಯಾಸಿಸ್ಟ್ ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಬೇಕು ಎಂಬ ಸ್ಪಷ್ಟ ಸೂಚನೆ ಮತ್ತು ಎಚ್ಚರಿಕೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ಹೇಳಿದೆ.
ಸೂರತ್’ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪ್ರಕರಣವನ್ನು ಬಳಸಿಕೊಂಡು ಹಿರಿಯ ಸಂಸದ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿದ ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ, ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಇಲ್ಲದ ಪ್ರತಿಪಕ್ಷ ಮುಕ್ತ ಹಿಂದುತ್ವ ರಾಷ್ಟ್ರವನ್ನು ಸ್ಥಾಪಿಸಲು ಬಿಜೆಪಿ ಬಯಸಿದೆ ಎಂದು ಎಚ್ಚರಿಸಿರುವ ಫೈಝಿ, ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಒಂದೇ ಕಾರ್ಯಸೂಚಿಯೊಂದಿಗೆ ಒಗ್ಗೂಡುವ ಸಮಯ ಬಂದಿದೆ, ಇಲ್ಲದಿದ್ದರೆ ಭಾರತವು ಸಂಪೂರ್ಣವಾಗಿ ಬಿಜೆಪಿಯ ಫ್ಯಾಶಿಸ್ಟ್ ಕಾರ್ಯಸೂಚಿಗೆ ಬೀಳುವ ಸಮಯ ದೂರವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

Join Whatsapp