ಆರೋಪಿಗಳಿಂದ ವಶಪಡಿಸಿಕೊಂಡಿದ್ದ 11 ಕೆ.ಜಿ.ಗಾಂಜಾ ನಾಶಪಡಿಸಿದ ಮಂಗಳೂರು ಪೊಲೀಸರು

Prasthutha|

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ 11 ಕೆ.ಜಿ. ಗಾಂಜಾ, 14 ಮಿ.ಗ್ರಾಂ ಎಂಡಿಎಂಐ ಸಹಿತ ಮಾದಕ ವಸ್ತುವನ್ನು ಪೊಲೀಸ್ ಅಧಿಕಾರಿಗಳು ಶುಕ್ರವಾರ ನಾಶ ಪಡಿಸಿದ್ದಾರೆ.
ಜಿಲ್ಲೆಯ ಮೂಲ್ಕಿಯ Ramky Energy Environment Ltd ಎಂಬಲ್ಲಿ ಗಾಂಜಾ ಮತ್ತು ಎಂಡಿಎಂಐ ಅನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು.
ಸೆನ್ ಪೊಲೀಸ್ ಠಾಣೆ, ಕೊಣಾಜೆ, ಪಣಂಬೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಸುರತ್ಕಲ್, ಬಜಪೆ, ಕಂಕನಾಡಿ ಪೊಲೀಸ್ ಠಾಣೆ ಪೊಲೀಸರು ವಿವಿಧ ಪ್ರಕರಣಗಳನ್ನು ಭೇದಿಸಿ ಈ ಗಾಂಜಾವನ್ನು ವಶಪಡಿಸಿಕೊಂಡಿದ್ದರು.

- Advertisement -