ಇದು ಪ್ರಜಾಪ್ರಭುತ್ವದ ಹತ್ಯೆ, ಸರ್ವಾಧಿಕಾರದ ಅಂತ್ಯದ ಆರಂಭ: ರಾಹುಲ್ ಸದಸ್ಯತ್ವ ರದ್ದತಿಗೆ ಉದ್ದವ್ ಠಾಕ್ರೆ ಕಿಡಿ

Prasthutha|

ಮುಂಬೈ: ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಶಿವಸೇನೆ ವರಿಷ್ಠ ಉದ್ದವ್ ಠಾಕ್ರೆ, ಇದು ಪ್ರಜಾಪ್ರಭುತ್ವದ ಹತ್ಯೆ ಹಾಗೂ ಸರ್ವಾಧಿಕಾರದ ಅಂತ್ಯದ ಆರಂಭ ಎಂದು ಗುಡುಗಿದ್ದಾರೆ.
ಕೆಲವರು ದೇಶವನ್ನು ಲೂಟಿ ಮಾಡುತ್ತಿರುವಾಗ, ಕಳ್ಳರನ್ನು ಕಳ್ಳ ಎನ್ನುವುದು ತಪ್ಪೇ ಎಂದು ಅವರು ಪ್ರಶ್ನಿಸಿದ್ದಾರೆ.
‘ಇದು ಪ್ರಜಾಪ್ರಭುತ್ವದ ಹತ್ಯೆ. ಎಲ್ಲ ಸಂಸ್ಥೆಗಳೂ ಒತ್ತಡದಲ್ಲಿವೆ. ಇದು ಸರ್ವಾಧಿಕಾರದ ಅಂತ್ಯದ ಆರಂಭ. ಈ ಹೋರಾಟವು ಸರಿಯಾದ ದಿಕ್ಕಿನಲ್ಲಿ ಸಾಗಬೇಕಿದೆ’ ಎಂದು ಅವರು ಹೇಳಿದ್ದಾರೆ.

Join Whatsapp