ಜಮ್ಮು ಕಾಶ್ಮೀರ: ಉಗ್ರರ ಗುಂಡಿಗೆ ಟಿಕ್ ಟಾಕ್ ಸ್ಟಾರ್ ಬಲಿ

Prasthutha|

ಶ್ರೀನಗರ: ಉಗ್ರರ ಗುಂಡಿನ‌ ದಾಳಿಗೆ 35 ವರ್ಷ ವಯಸ್ಸಿನ ಟಿಕ್ ಟಾಕ್ ಸ್ಟಾರ್ ಬಲಿಯಾದ ಘಟನೆ ಜಮ್ಮು ಕಾಶ್ಮೀರದ ಬುಡಗಾಂವ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಅಮ್ರೀನ್ ಬಟ್ ಹತ್ಯೆಯಾದ ಟಿಕ್ ಟಾಕ್ ಸ್ಟಾರ್ ಎಂದು ತಿಳಿದುಬಂದಿದೆ

ರಾತ್ರಿ 7.55ರ ಸುಮಾರಿಗೆ ಅಮ್ರೀನ್ ಬಟ್ ಎಂಬವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾಗಿ ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
ಅಮ್ರೀನ್ ಬಟ್ ಅವರು ಟಿಕ್-ಟಾಕ್ ಕಲಾವಿದೆ ಹಾಗೂ ಕಿರುತೆರೆ ನಟಿಯಾಗಿದ್ದರು.

Join Whatsapp