ಪಲ್ಲವಿ ಡೇ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಬ್ಬ ನಟಿ ನಿಗೂಢ ಸಾವು

Prasthutha|

ಕೊಲ್ಕತ್ತಾ: ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆ ಬೆನ್ನಲ್ಲೇ ನಟಿ ಬಿದಿಶಾ ಡೇ ಮಜುಂದಾರ್(21) ಅವರ ಮೃತದೇಹ ಡಂಡಂನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.

- Advertisement -

ಬಿದಿಶಾ ಡೇ ಮೃತದೇಹ ಬುಧವಾರ ಸಂಜೆ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಬಿದಿಷಾ ಅವರ ಅತ್ಮೀಯ ಸ್ನೇಹಿತರಿಂದ ಮತ್ತು ಕುಟುಂಬದವರಿಂದ ಮಾಹಿತಿ ಪಡೆಯುತ್ತಿದ್ದಾರೆ.

Join Whatsapp