ಸರ್ಕಸ್ ಪ್ರದರ್ಶನದ ವೇಳೆ ತರಬೇತುದಾರನ ಮೇಲೆಯೇ ದಾಳಿ ಮಾಡಿದ ಹುಲಿ

Prasthutha|

ಇಟಲಿ: ಸರ್ಕಸ್ ಪ್ರದರ್ಶನ ವೇಳೆ ತರಬೇತುದಾರನ ಮೇಲೆಯೇ ಹುಲಿಯೊಂದು ದಾಳಿ ಮಾಡಿ ಗಾಯಗೊಳಿಸಿದ ಘಟನೆ ಇಟಾಲಿಯನ್ ಪ್ರಾಂತ್ಯದ ಲೆಸ್ಸೆಯಲ್ಲಿ ನಡೆದಿದೆ.

- Advertisement -

ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿದೆ. ಸರ್ಕಸ್ ಪ್ರದರ್ಶನ ನೀಡುತ್ತಿರುವ ವ್ಯಕ್ತಿಯೊಬ್ಬನ ಮೇಲೆ ಇದ್ದಕ್ಕಿದ್ದಂತೆ ಹುಲಿ ದಾಳಿ ಮಾಡಿ ಕಾಲು, ಕುತ್ತಿಗೆಗೆ ಗಂಭೀರ ಗಾಯಗೊಳಿಸಿದೆ.

ಹುಲಿಯ ದಾಳಿಗೊಳಗಾಗಿ ಗಂಭೀರ ಗಾಯಗೊಂಡ ತರಬೇತುದಾರನನ್ನು ಇವಾನ್ ಓರ್ಫೀ (31) ಎನ್ನಲಾಗಿದೆ, ಕೂಡಲೇ ಅಲ್ಲಿದ್ದ ಇತರ ತರಬೇತುದಾರರು ಹುಲಿಯ ದಾಳಿಯಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Join Whatsapp