ಕ್ರೆಡಿಟ್ ಕಾರ್ಡ್ ಮೂಲಕ ಬೇರೆ ಬ್ಯಾಂಕುಗಳಿಗೆ ಅಕ್ರಮ ಹಣ ವರ್ಗಾವಣೆ: ಮಂಗಳೂರಿನಲ್ಲಿ ಟಿಬೆಟಿಯನ್ ಪ್ರಜೆಗಳ ಬಂಧನ !

Prasthutha|

ಮಂಗಳೂರು: ಕ್ರೆಡಿಟ್ ಕಾರ್ಡ್ ಮೂಲಕ ಬೇರೆ ಬ್ಯಾಂಕುಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ
ಮಂಗಳೂರು ಪೊಲೀಸರು ಟಿಬಿಟಿಯನ್ ಪ್ರಜೆಗಳಿಬ್ಬರನ್ನು ಬಂಧಿಸಿದ್ದಾರೆ.

- Advertisement -


ಉತ್ತರಕನ್ನಡ ಟಿಬೆಟಿಯನ್ ಕಾಲೊನಿಯ ಲಾಮಾ ಕ್ಯಾಂಪ್ ನಲ್ಲಿ ವಾಸವಿರುವ ಲೋಬಸಂಗ್ ಸಂಗ್ಯೆ (24) ಹಾಗೂ ದಕಪ ಪುಂದೇ (40) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.


ಮಂಗಳೂರಿನ ಅತ್ತಾವರ ನಿವಾಸಿಯಾದ ಸಿ.ಡಿ ಅಲೆಕ್ಸಾಂಡರ್ ಎಂಬವರು ಎಸ್ ಬಿ ಐ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್, ಕಳೆದ ಮೂರು ವರ್ಷದಿಂದ ಅವರು ಬಳಸುತ್ತಿದ್ದು, ಕಳೆದ ಮಾರ್ಚ್ 23ರಂದು ಬ್ಯಾಂಕ್ ಗೆ ಹಸ್ತಾಂತರ ಮಾಡಿದ್ದರು. ಆದರೆ ಮಾರ್ಚ್ 27ರಂದು ಅವರ ಖಾತೆಯಿಂದ ಯಾರೋ ಅಪರಿಚಿತರು 1,12,00 ರೂ. ಬೇರೆ ಬೇರೆ ಖಾತೆಗೆ ವರ್ಗಾಯಿಸಿರುವುದು ಬ್ಯಾಂಕ್ ಸ್ಟೇಟ್ ಮೆಂಟ್ ನಲ್ಲಿ ತಿಳಿದುಬಂದಿತ್ತು. ಈ ಹಿನ್ನಲೆಯಲ್ಲಿ ಅವರು ಮಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರಿಗೆ “ಮೊಬೈಲ್ ವಿಕಿ ವಾಲೆಟ್ ಆಪ್’’ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್ ಕೇರ್ ಸ್ಮಾಲ್ ಪೈನ್ಯಾನ್ಸ್ ಬ್ಯಾಂಕ್ ನಲ್ಲಿರುವ ಎರಡು ಖಾತೆಗಳಿಗೆ ಮತ್ತು ಆ ಬಳಿಕ ಇದು ಉತ್ತರಕನ್ನಡ ಟಿಬೆಟಿಯನ್ ಕಾಲೊನಿಯ ಲಾಮಾ ಕ್ಯಾಂಪ್ ನಲ್ಲಿ ವಾಸವಿರುವ ಲೋಬಸಂಗ್ ಸಂಗ್ಯೆಯ ಕೆನರಾ ಡಿಸಿಪಿ ಬ್ಯಾಂಕ್ ಗೆ ವರ್ಗಾವಣೆ ಯಾಗಿರುವುದು ಕಂಡುಬಂದಿದೆ.

- Advertisement -

ಈ ಹಿನ್ನಲೆಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮೊದಲ ಆರೋಪಿ ತಲೆ ಮರೆಸಿ ಕೊಂಡಿದ್ದಾನೆಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಮಾಹಿತಿ ನೀಡಿದ್ದಾರೆ.

Join Whatsapp