ಕೇರಳ – ಮಡಿಕೇರಿ ಮುಕ್ತ ವಾಹನ ಸಂಚಾರಕ್ಕೆ ಕೇರಳ ಬಿಜೆಪಿಯಿಂದ ಶಾಸಕ ಕೆ.ಜಿ. ಬೋಪಯ್ಯರಿಗೆ ಮನವಿ

Prasthutha|

ಮಡಿಕೇರಿ: ಕೋವಿಡ್ ಕಾರಣದಿಂದ ಮೊಟಕುಗೊಂಡಿರುವ ಕೇರಳ – ಮಡಿಕೇರಿ ವಾಹನ ಸಂಚಾರವನ್ನು ಶೀಘ್ರವೇ ಬಗೆಹರಿಸುವಂತೆ ಕೇರಳದ ಕಣ್ಣೂರು ಬಿಜೆಪಿ ಅಧ್ಯಕ್ಷ ಹರಿದಾಸ್ ಅವರ ನೇತೃತ್ವದ ತಂಡ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ರಾಜ್ಯದಿಂದ ಕೇರಳಕ್ಕೆ ಪ್ರಯಾಣಿಸುವ ವಾಹನಗಳಿಗೆ ಯಾವುದೇ ನಿಬಂಧನೆಗಳಿಲ್ಲದಿದ್ದರೂ, ಕೇರಳದಿಂದ ಮಡಿಕೇರಿಗೆ ಬರುವ ವಾಹನಗಳಿಗೆ ಮಾಕುಟ್ಟ ಗಡಿಯಲ್ಲಿ ನಿಬಂಧನೆಗಳಿವೆ, ಅದನ್ನು ಶೀಘ್ರವೇ ಸರಿ ಪಡಿಸುವಂತೆ ಒತ್ತಾಯಿಸಿದರು.

- Advertisement -

ಇಲ್ಲಿನ ಸರಕಾರಿ ಬಸ್ಸುಗಳು ಹಾಗೂ ಇತರ ವಾಹನಗಳು ಕೇರಳ ರಾಜ್ಯಕ್ಕೆ ಬಾರದೇ ಸುಮಾರು ನಾಲ್ಕು ತಿಂಗಳಾಗಿದ್ದು, 72 ಗಂಟೆ ಒಳಗಿನ RTPCR ವರದಿಯನ್ನು ಹೊಂದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಎರಡು ಲಸಿಕೆ ಪಡೆದವರಿಗೂ ಅನುಮತಿ ನಿರಾಕರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಮುಕ್ತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಿತು.

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬೋಪಯ್ಯ ನೆರೆಯ ಕೇರಳದಲ್ಲಿ ಕೋವಿಡ್ ಪ್ರಕರಣದ ಶೇಕಡವಾರು ಸಂಖ್ಯೆ ಹೆಚ್ಚಿದ್ದು ಸದ್ಯಕ್ಕೆ ನಿಯಮ ಸಡಿಲಿಕೆ ಸಾಧ್ಯವಿಲ್ಲ. ಈ ಕುರಿತು ಕೇರಳ ರಾಜ್ಯದವರು ನ್ಯಾಯಾಲಯಕ್ಕೂ ಹೋಗಿದ್ದು, ನ್ಯಾಯಾಲಯ ಕೂಡ ಅದನ್ನು ಮಾನ್ಯ ಮಾಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೇರಳದಿಂದ ರಾಜ್ಯಕ್ಕೆ ಪ್ರವೇಶ ಮಾಡಲು ನಿಬಂಧನೆಗಳನ್ನು ಸರಕಾರ ವಿಧಿಸಿದ ನಿಯಮಗಳನ್ನು ಪಾಲಿಸಬೇಕು ಎಂದಿದ್ದಾರೆ.

Join Whatsapp