ಮಡಿಕೇರಿ | ವಿದ್ಯುತ್ ತಂತಿಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಬೆಂಕಿ

Prasthutha|

ಮಡಿಕೇರಿ : ಇಲ್ಲಿನ ಕಿಕ್ಕರಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿಯೊಂದು ಬೃಹತ್ ಗಾತ್ರದ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಗುರುವಾರ ನಡೆದಿದೆ. ಶಾಂತಳ್ಳಿ ಮಾರ್ಗದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಕಿಕ್ಕರಳ್ಳಿ ಬಸ್ ನಿಲ್ದಾಣದ ಬಳಿ ಇರುವ ಭಾರೀ ಗಾತ್ರದ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ.

- Advertisement -

ಬೆಂಕಿ ಹೊತ್ತುಕೊಂಡ ಪರಿಣಾಮ ಕುಂಬಾರಗಡಿಗೆ, ಕಿಕ್ಕರಳ್ಳಿ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಶೀಘ್ರವೇ ತಂತಿ ಜೋಡಿಸಲು ವಿದ್ಯುತ್ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.

ಘಟನಾ ಪ್ರದೇಶದ ಮರವನ್ನು ತೆರವುಗೊಳಿಸಲು ಗರ್ವಾಲೆ ಗ್ರಾ.ಪಂ ಅಧ್ಯಕ್ಷ ಕೊಚ್ಚೇರ ನಂಜುoಡ, ಸ್ಥಳೀಯರಾದ ಕನ್ನಿಗಂಡ ದಿನೇಶ್ ಪೊನ್ನಪ್ಪ, ಕನ್ನಿಗಂಡ ಕಿರಣ್ ಕಾವೇರಪ್ಪ, ಕನ್ನಿಗಂಡ ದರ್ಶನ್, ಪುದಿಯತಂಡ ಕೆ.ರವಿ ಸೇರಿದಂತೆ ಇನ್ನಿತರರು ಕೈಜೋಡಿಸಿದರು.

Join Whatsapp