ಒಂದೇ ಕುಟುಂಬದ ಮೂವರು ಮಹಿಳೆಯರು ನೇಣಿಗೆ ಶರಣು

Prasthutha|

ಚಿಕ್ಕಮಗಳೂರು: ಒಂದೇ ಮನೆಯಲ್ಲಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಮಕ್ಕಿಮನೆ ಗ್ರಾಮದಲ್ಲಿ ನಡೆದಿದೆ.


ಮೃತರನ್ನು ಶೃಂಗೇರಿ ತಾಲೂಕಿನ ಮಕ್ಕಿಮನೆ ಗ್ರಾಮದ ಸುಧಾಕರ್ ಎಂಬುವರ ಕುಟುಂಬದ ಮೂವರು ಸದಸ್ಯರಾದ ವೀಣಾ (49), ಶಾರದಾ (70), ಶ್ರಾವ್ಯಾ(16) ಎಂದು ತಿಳಿದುಬಂದಿದೆ.

- Advertisement -


ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -