ಇದು ಸ್ಮಾರ್ಟ್ ಸಿಟಿ ಅಲ್ಲ, ಬಿಜೆಪಿಯ ಸ್ಮಾರ್ಟ್ ಲೂಟಿ!: ಕಾಂಗ್ರೆಸ್ ವ್ಯಂಗ್ಯ

Prasthutha|

ಬೆಂಗಳೂರು: ಇದು ಸ್ಮಾರ್ಟ್ ಸಿಟಿ ಅಲ್ಲ, ಬಿಜೆಪಿಯ ಸ್ಮಾರ್ಟ್ ಲೂಟಿ! ಸ್ಮಾರ್ಟ್ ಸಿಟಿ ಹೆಸರಲ್ಲಿ ಬಿಜೆಪಿ ಸರ್ಕಾರದ ಸಹಕಾರದಲ್ಲಿಯೇ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ, ಆರ್.ಅಶೋಕ ಅವರೇ ಕಳಪೆ ಕಾಮಗಾರಿಯನ್ನು ಒಪ್ಪಿದರೂ ತಡೆಗಟ್ಟುವ ಕ್ರಮ ಕೈಗೊಂಡಿಲ್ಲ. ಇದು ಬಿಜೆಪಿ ಪ್ರೇರಿತ ಹಗರಣ ಎಂಬುದು ನಿಸ್ಸಂಶಯ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.


ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “ನಾ ಖಾವುಂಗಾ, ನಾ ಖಾನೆದುಂಗ” ಎನ್ನುತ್ತಿದ್ದ ನರೇಂದ್ರ ಮೋದಿ ಅವರು ಬೆಂಗಳೂರಿನ ಸ್ಮಾರ್ಟ್ ಸಿಟಿ ಹೆಸರಲ್ಲಿ ನಡೆದಿರುವ ಸ್ಮಾರ್ಟ್ ಲೂಟಿ ಬಗ್ಗೆ ಕ್ರಮ ಕೈಗೊಳ್ಳದೆ “ಮೇ ಸಭಿ ಕೋ ಖಾನೆದುಂಗ” ಎಂಬಂತೆ ನಡೆದುಕೊಳ್ಳುತ್ತಿದ್ದಾರೆ! ಈ ಹಗರಣದಲ್ಲಿ ಬಿಜೆಪಿ ಸರ್ಕಾರವೂ ಭಾಗಿಯಾಗಿದೆ, ಇದರ ತನಿಖೆಗೂ ವಹಿಸದೆ ಸುಮ್ಮನಿರುವುದೇಕೆ ಚೌಕಿದಾರ್? ಎಂದು ಕುಹಕವಾಡಿದೆ.

- Advertisement -