ಬಾಲಿವುಡ್ ನಟ ಸೋನು ಸೂದ್ ಮನೆ, ಕಚೇರಿಗಳ ಮೇಲೆ ಐಟಿ ರೈಡ್

Prasthutha|

ನವದೆಹಲಿ: ಬಾಲಿವುಡ್ ನಟ ಸೋನು ಸೂದ್ ಗೆ ಸಂಬಂಧಿಸಿದ ಮುಂಬೈಯ ಆರು ಸ್ಥಳಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

- Advertisement -

ಶಾಲಾ ವಿದ್ಯಾರ್ಥಿಗಳಿಗಾಗಿ ದೆಹಲಿ ಸರ್ಕಾರದ ವತಿಯಿಂದ ನಡೆಯುತ್ತಿರುವ ಮಾರ್ಗದರ್ಶಕ ಕಾರ್ಯಕ್ರಮದಲ್ಲಿ ರಾಯಭಾರಿಯಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ಈ ದಾಳಿ ನಡೆಸಲಾಗಿದೆ.

ಈ ಮಧ್ಯೆ ಸೋನು ಸೂದ್ ರಾಜಕೀಯಕ್ಕೆ ಸೇರ್ಪಡೆಯಾಗುವ ಸಾಧ್ಯತೆಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಆಡಳಿತಾರೂಢ ಆಮ್ ಆದ್ಮಿ ಪಕ್ಷದೊಂದಿಗೆ ಸೋನು ಸೂದ್ ಅವರ ಹೆಸರು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರು ಈ ಕುರಿತು ಸೋನು ಅವರನ್ನು ಪ್ರಶ್ನಿಸಿದ್ದರು.

- Advertisement -

ಬಾಲಿವುಡ್ ನ ಖ್ಯಾತ ನಟರಾದ ಸೋನು ಸೂದ್ ಕೋವಿಡ್ ಸಮಯದಲ್ಲಿ ತನ್ನ ದಾನ ಕಾರ್ಯದಿಂದಾಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಸೋನು ಸೂದ್ ಅವರ ಮಾನವೀಯ ಪ್ರಯತ್ನಗಳು ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಸೃಷ್ಟಿಸಿದೆ.

Join Whatsapp