ಮಲಯಾಳಂ ನಟ ಪೃಥ್ವಿರಾಜ್ ಗೆ ‘ಗೋಲ್ಡನ್ ವೀಸಾ’ ನೀಡಿದ UAE

Prasthutha|

ದುಬೈ: ಖ್ಯಾತ ಮಲಯಾಳಂ ನಟ ಪೃಥ್ವಿರಾಜ್ ಅವರಿಗೆ UAE ಸರಕಾರ ಗೋಲ್ಡನ್ ವೀಸಾ ನೀಡಿದೆ. UAE ಗೋಲ್ಡನ್ ವೀಸಾ ಹತ್ತು ವರ್ಷಗಳವರೆಗೆ ಮಾನ್ಯವಾಗಿರುತ್ತದೆ.

‘ಗೋಲ್ಡ್’ ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನ ಗೋಲ್ಡನ್ ವೀಸಾ ಲಭಿಸಿದ್ದಕ್ಕೆ ಪೃಥ್ವಿರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.  ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ವ್ಯಕ್ತಿಗಳಿಗೆ UAE ಗೋಲ್ಡನ್ ವೀಸಾವನ್ನು ನೀಡುತ್ತದೆ.

- Advertisement -

ಈ ಹಿಂದೆ ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ಸಂಜಯ್ ದತ್ ಮತ್ತು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಗೋಲ್ಡನ್ ವೀಸಾ ನೀಡಲಾಗಿತ್ತು.

- Advertisement -