‘ಸೆಪ್ಟಂಬರ್‌ನಲ್ಲಿ 3ನೇ ಅಲೆ, ಪರಿಸ್ಥಿತಿ ಇದಕ್ಕಿಂತಲೂ ಭೀಕರವಾಗಿರುತ್ತೆ!’ : ತಜ್ಞರ ಎಚ್ಚರಿಕೆ

Prasthutha|

ನಾಗ್ಪುರ: ದೇಶದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿರುವುದರ ನಡುವೆ ತಜ್ಞರು ಬೆಚ್ಚಿ ಬೀಳಿಸುವ ಎಚ್ಚರಿಕೆಯನ್ನ ನೀಡಿದ್ದು, ಸೆಪ್ಟೆಂಬರ್ʼನಲ್ಲಿ ದೇಶದಲ್ಲಿ ಕೋವಿಡ್ನ ಮೂರನೇ ಅಲೆ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.

- Advertisement -

 ಸರ್ಕಾರ ಮಕ್ಕಳ ಲಸಿಕೆಯನ್ನ ತ್ವರಿತಗೊಳಿಸಬೇಕು ಇಲ್ಲದಿದ್ದರೆ ಕೋವಿಡ್-19 ರ ನಿರೀಕ್ಷಿತ ಮೂರನೇ ಅಲೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಜನಸಂಖ್ಯೆಗೆ ಬಾಧಿಸಲಿದೆ. ಮೂರನೇ ಅಲೆಯು ಕೋವಿಡ್ನ ಗಂಭೀರ ಸ್ವರೂಪವಾಗಿರಲಿದೆ ಎಂದು ಮಕ್ಕಳ ಮತ್ತು ಸಾಂಕ್ರಾಮಿಕ ರೋಗಗಳ ತಜ್ಞರು ಎಚ್ಚರಿಸಿದ್ದಾರೆ.

‘ಮಕ್ಕಳ ಲಸಿಕೆ ಹೊರ ತರುವುದು ತುಂಬಾನೇ ಮುಖ್ಯ. ಇಲ್ಲದಿದ್ದರೆ ಮೂರನೇ ಅಲೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಲಸಿಕೆ ಪಡೆಯದ ಜನರ ಮೇಲೆ ಪರಿಣಾಮ ಬೀರಲಿದೆ’ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ. ನಿತಿನ್ ಶಿಂಧೆ ಹೇಳಿದ್ದಾರೆ. ’18ರಿಂದ 44 ವರ್ಷ ವಯಸ್ಸಿನ ನಾಗರಿಕರಿಗೆ ಲಸಿಕೆ ಈಗಾಗಲೇ ಪ್ರಾರಂಭವಾಗಿದೆ.ಆದ್ದರಿಂದ ವೈರಸ್ ಲಸಿಕೆ ಪಡೆಯದವರನ್ನು ಗುರಿಯಾಗಿಸಲಿದೆ’ ಎಂದು ಡಾ. ಶಿಂಧೆ ಹೇಳಿದ್ದಾರೆ.

Join Whatsapp