ಬಂಗಾಳದಲ್ಲೂ ಗುಜರಾತ್ ಮಾದರಿ ಪೂರ್ವಯೋಜಿತ ಗಲಭೆ ನಡೆಯಲಿದೆ : ರಂಗಕರ್ಮಿ ಪ್ರಕಾಶ್ ಬೆಳವಾಡಿ ಫೇಸ್ಬುಕ್ ಪೋಸ್ಟ್

Prasthutha|

►ವ್ಯಾಪಕ ಆಕ್ರೋಶದ ಬಳಿಕ ಪೋಸ್ಟ್ ಡಿಲೀಟ್!

- Advertisement -

ಬೆಂಗಳೂರು : ಗುಜರಾತ್ ನಲ್ಲಿ ನಡೆದಂತೆ ಪಶ್ಚಿಮ ಬಂಗಾಳದಲ್ಲೂ ವ್ಯವಸ್ಥಿತ ಕೋಮು ಗಲಭೆ ನಡೆಯಲಿದೆ ಎಂದು ರಂಗಕರ್ಮಿ, ನಿರ್ದೇಶಕ ಹಾಗೂ ಚಿತ್ರನಟ ಪ್ರಕಾಶ್ ಬೆಳವಾಡಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. #communalviolence ಎಂಬ ಹ್ಯಾಶ್ ಟ್ಯಾಗ್ ಬಳಸಿ ಹಾಕಿದ ಈ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕಾಶ್ ಬೆಳವಾಡಿ ತಮ್ಮ ಪೋಸ್ಟ್ ಅನ್ನು ಅಳಿಸಿ, ಪ್ರೊಫೈಲನ್ನು ನಿಷ್ಕ್ರಿಯಗೊಳಿಸಿದ್ದಾರೆ.

59 ಮಂದಿ ಯಾತ್ರಾರ್ಥಿಗಳಿದ್ದ ಗೋಧ್ರಾ ರೈಲು ದುರಂತದ ದಿನ ನನಗೆ ಈಗ ಸ್ನೇಹಿತರಲ್ಲದ ಉದಾರವಾದಿ ಸ್ನೇಹಿತರೊಬ್ಬರು ಅಹಮದಾಬಾದಿನಿಂದ ಕರೆ ಮಾಡಿ “ಈ ಘಟನೆ ಸಂಘಿಗಳಿಗೆ ಪಾಠ ಕಲಿಸಲಿದೆ” ಎಂದು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ನಾನು ಪ್ರತೀಕಾರ ವೇಗ ಭಯಾನಕವಾಗಿರುತ್ತದೆ ಎಂದು ಹೇಳಿದ್ದೆ. ಅದರಂತೆ ಆಯ್ತು ಕೂಡಾ…ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ಗುಜರಾತ್ ನ ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ.8ರಷ್ಟು ಮಾತ್ರ ಇದ್ದುದರಿಂದ ಖಂಡಿತವಾಗಿಯೂ ಅದು ಸುಲಭವಾಗಿತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ ಅದು ತಕ್ಷಣವೇ ಆಗಲು ಸಾಧ್ಯವಿಲ್ಲ. ಅಲ್ಲಿ ಮುಸ್ಲಿಮರು ಶೇ.30ರಷ್ಟು ಇದ್ದಾರೆ. ಅಂತಹಾ ಘಟನೆ ಸಂಭವಿಸಲಿದೆ. ಹಿಂದೂ- ಮುಸ್ಲಿಂ ಗಲಭೆ ಸಂಭವಿಸಲಿದ್ದು, ದುರಂತವೂ, ಬರ್ಬರವೂ ಹಾಗೂ ವ್ಯವಸ್ಥಿತವೂ ಆಗಿರಲಿದೆ ಎಂದು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.    

ಬೆಳವಾಡಿಯ ಪೋಸ್ಟ್ ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಗುಜರಾತ್ ಹತ್ಯಾಕಾಂಡ ವ್ಯವಸ್ಥಿತವಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರೆ, ಕೋಮು ಸಾಮರಸ್ಯ ಕದಡುವ ಪೋಸ್ಟ್ ಹಾಕಿರುವ ಬೆಳವಾಡಿ ವಿರುದ್ಧ ಸ್ವಯಮ ಪ್ರೇರಿತ ದೂರು ದಾಖಲಿಸಲು ಕೆಲವರು ಒತ್ತಾಯಪಡಿಸಿದ್ದಾರೆ.

Join Whatsapp