ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದ ಶಾಸಕ ಯುಟಿ ಖಾದರ್

Prasthutha|

ಮಂಗಳೂರು :  ಮಾಜಿ ಆರೋಗ್ಯ ಸಚಿವ ಯು.ಟಿ ಖಾದರ್ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಸದ್ಯದ ಸ್ಥಿತಿಗತಿಯ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಂದ ಮಾಹಿತಿ ಪಡೆದಿದ್ದು, ವೈದ್ಯಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

- Advertisement -

ಈ ವೇಳೆ ಮಾತನಾಡಿದ ಖಾದರ್, ಮುಂದಿನ ದಿನಗಳ ಪರಿಸ್ಥಿತಿ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಆಕ್ಸಿಜನ್ ಬಗ್ಗೆ ರಾಜ್ಯ ಸರ್ಕಾರ,ಪ್ರತಿ ಜಿಲ್ಲಾಡಳಿತ ಶ್ವೇತ ಪತ್ರ ಬಿಡುಗಡೆಗೊಳಿಸಿ ರಾಜ್ಯಕ್ಕೆ ಆಕ್ಸಿಜನ್ ಬೇಡಿಕೆ ಎಷ್ಟಿದೆ ಪೂರೈಕೆ ಎಷ್ಟಾಗುತ್ತಿದೆ ಎಂಬ ಸ್ಪಷ್ಟವಾದ ಮಾಹಿತಿ ತಿಳಿಸಬೇಕು. ಎಲ್ಲಾ ವ್ಯವಸ್ಥೆಗಳಿವೆ, ಏನೂ ಸಮಸ್ಯೆಯಿಲ್ಲ ಎಂದು ಸರ್ಕಾರ ಈ ಹಿಂದೆ ಹೇಳಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಾರಗಳ ಹಿಂದೆ ಆಕ್ಸಿಜನ್ ಕೊರತೆ ಬಗ್ಗೆ ಗಮನ ಸೆಳೆದಿದ್ದರು. ಏನು ಸಮಸ್ಯೆಯಿಲ್ಲ,ಆಕ್ಸಿಜನ್ ಕೊರತೆಯಿಲ್ಲ ಎಂದು ದಿನಕ್ಕೊಂದು ಸಚಿವರು ಹೇಳಿಕೆ ನೀಡಿದ್ದರು. ಹಾಗಾದ್ರೆ ಚಾಮರಾಜನಗರದ ದುರಂತಕ್ಕೆ ಯಾರು ಹೊಣೆ..? ಎಂದು ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಗೆ 80% ಆಕ್ಸಿಜನ್ ಜಿಂದಾಲ್ ನಿಂದ ಬರ್ತಿದೆ. 20% ಕೇರಳದ ಪಾಲ್ಗಾಟ್ ನಿಂದ ಬರುತ್ತಿದೆ. ಕೇರಳದಲ್ಲಿ ಕೊರೋನಾ ಕೇಸ್ ಹೆಚ್ಚಾದ್ರೆ ಆಕ್ಸಿಜನ್ ಸಪ್ಲೈ ನಿಲ್ಲುವ ಸಾಧ್ಯತೆ ಇದೆ. ಇದಕ್ಕಾಗಿ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು. ಜಿಂದಾಲ್ ನಿಂದ ಮಹಾರಾಷ್ಟ್ರ, ಆಂದ್ರಕ್ಕೆ ಲಿಕ್ವಿಡ್ ಆಕ್ಸಿಜನ್ ಕಳುಹಿಸಲಾಗುತ್ತಿದೆ.  ತಮಿಳುನಾಡಿನ ಸಂಸದರು ಕೇಂದ್ರಕ್ಕೆ ಒತ್ತಡ ಹಾಕಿ ಹೆಚ್ಚುವರಿ ಆಕ್ಸಿಜನ್ ಪಡೆಯುತ್ತಿದ್ದಾರೆ. ನಮ್ಮ ಸಂಸದರು, ಸರ್ಕಾರಕ್ಕೆ ಯಾಕೆ ಇದು ಸಾಧ್ಯ ಆಗುತ್ತಿಲ್ಲ. ಕರ್ನಾಟಕವನ್ನು ‘ಮೆಡಿಕಲ್ ಎಮರ್ಜೆನ್ಸಿ ಸ್ಟೇಟ್’ ಎಂದು ಡಿಕ್ಲೇರ್ ಮಾಡಿ ರಾಜ್ಯಕ್ಕೆ ಬೇಕಾದ ಎಲ್ಲ ಮೆಡಿಕಲ್ ಸೌಲಭ್ಯ ಪಡೆದುಕೊಳ್ಳಬೇಕು. ಮಂತ್ರಿಗಳು, ಮುಖ್ಯಮಂತ್ರಿಗಳ ನಡುವೆ ಸಮನ್ವಯತೆ ಇರಬೇಕು. ದಿನಕ್ಕೊಂದು ಹೇಳಿಕೆ ಕೊಟ್ಟರೆ ಜನ ಸಾಮಾನ್ಯರು ಗೊಂದಲಕ್ಕೆ ಒಳಗಾಗುತ್ತಾರೆ ಎಂದು ಸರ್ಕಾರದ ವಿರುದ್ದ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp