ಥಾಣೆ: ಭಕ್ತರ ಸೋಗಿನಲ್ಲಿ ಹನುಮಾನ್ ಮಂದಿರಕ್ಕೆ ಬಂದಿದ್ದ 18 ವರ್ಷದ ಯುವಕನೋರ್ವ ಮೊದಲು ಹನುಮಾನ್ ವಿಗ್ರಹದ ಪಾದ ಮುಟ್ಟಿ ವಂದಿಸಿದ ಬಳಿಕ ಅಲ್ಲೇ ಇದ್ದ ಕಾಣಿಕೆ ಡಬ್ಬಿಯನ್ನು ಕದ್ದೊಯ್ದಿದ್ದಾನೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹರಾಷ್ಟ್ರದ ಪಶ್ಚಿಮ ಥಾಣೆಯ ಕೊಪಾಟ್ ಬಸ್ ಡಿಪೋ ಸಮೀಪದ ಕಬೀರ್’ವಾಡಿ ಹನುಮಾನ್ ಮಂದಿರದಲ್ಲಿ ಘಟನೆ ನಡೆದಿದ್ದು, ಯುವಕನ ಕೃತ್ಯ ಮಂದಿರದಲ್ಲಿ ಅಳವಡಿಸಲಾಗಿದ್ದ CCTVಯಲ್ಲಿ ಸೆರೆಯಾಗಿದೆ. ಕಬೀರ್’ವಾಡಿ ಹನುಮಾನ್ ಮಂದಿರದ ಪೂಜಾರಿ ಮಹಾವೀರ್;ದಾಸ್ ಮಹರಾಜ ದಾಖಲಿಸಿದ್ದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ನೌಪಾಡಾ ಪೊಲೀಸ, CCTV ದೃಶ್ಯದ ಆಧಾರದಲ್ಲಿ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಾದರಕ್ಷೆ ಹೊರಗೆ ಬಿಟ್ಟು ರಾತ್ರಿ ವೇಳೆಯಲ್ಲಿ ಮಂದಿರ ಪ್ರವೇಶಿಸಿದ್ದ ಯುವಕ ಮೊದಲು ಗಂಟೆ ಭಾರಿಸಿ, ಬಳಿಕ ಮೊಬೈಲ್’ನಲ್ಲಿ ಹನುಮಾನ್ ವಿಗ್ರಹದ ಫೋಟೋ ತೆಗೆದಿದ್ದಾನೆ. ಬಳಿಕ ಮೂರ್ತಿಯ ಬಳಿ ಬಂದು ಪಾದ ಮುಟ್ಟಿ ನಮಸ್ಕರಿಸಿ ಅಲ್ಲೇ ಇದ್ದ ಕಾಣಿಕೆಡಬ್ಬಿಯೊಂದಿಗೆ ಓಟಕಿತ್ತಿದ್ದಾನೆ
2019ರಲ್ಲಿ ಹೈದರಾಬಾದ್’ನಲ್ಲೂ ಸಮಾನವಾದ ರೀತಿಯಲ್ಲಿ ಕಳ್ಳತನ ನಡೆದಿತ್ತು. ಗನ್’ಫೋಂಡ್ರಿ ಪ್ರದೇಶದ ದುರ್ಗಾ ಭವಾನಿ ದೇಗುಲಕ್ಕೆ ಬಂದಿದ್ದ ಕಳ್ಳನೊಬ್ಬ ಮೊದಲು ದುರ್ಗಾ ದೇವಿಯ ವಿಗ್ರಹಕ್ಕೆ ನಮ್ಸಕರಿಸಿ ಬರಿಸಿ ಬಳಿಕ ವಿಗ್ರಹದಲ್ಲಿದ್ದ ಕಿರೀಟವನ್ನು ಎಗರಿಸಿ ಮತ್ತೊಮ್ಮೆ ದೇವಿಯ ವಿಗ್ರಹಕ್ಕೆ ನಮಸ್ಕರಿಸಿ ಪರಾರಿಯಾಗಿದ್ದ.