ಕೊಡಗು ಜಿಲ್ಲಾ ಉಪ ಖಾಝಿಯಾಗಿ ಶಾದುಲಿ ಫೈಝಿ ನೇಮಕ

Prasthutha|

ಮಡಿಕೇರಿ: ಕೊಡಗು ಜಿಲ್ಲಾ ಉಪ ಖಾಝಿ (ನಾಯಿಬ್ ಖಾಝಿ) ಆಗಿ ಶಾದುಲಿ ಫೈಝಿ ಅವರನ್ನು ಆಯ್ಕೆ ಮಾಡಲಾಗಿದೆ.

- Advertisement -

ಕೇರಳದ ಕಲ್ಲಿಕೋಟೆಯ ಮರ್ಕಝ್ ನಲ್ಲಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಕಿಲ್ಲೂರು ತಂಙಳ್ ಅವರ ನೇತೃತ್ವದ ಕೊಡಗು ಜಿಲ್ಲಾ ನಿಯೋಗ ಕೂಡ ಸಭೆಯಲ್ಲಿ ಪಾಲ್ಗೊಂಡಿತ್ತು.

ಕರ್ನಾಟಕ ಇಸ್ಲಾಂ ಧಾರ್ಮಿಕ ವಿದ್ಯಾಭ್ಯಾಸ ಸಂಸ್ಥೆಯ ರುವಾರಿಗಳಲ್ಲಿ ಒಬ್ಬರಾಗಿರುವ ಶಾದುಲಿ ಫೈಝೀ ಅವರು ಕೊಂಡಂಗೇರಿ ಯತೀಂ ಖಾನಾದ ಮುಖ್ಯಸ್ಥರಾಗಿ, ಜಂಇಯತ್ತುಲ್ ಉಲಮಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

- Advertisement -

ನಾಯಿಬ್ ಖಾಝಿಯಾಗಿದ್ದ ಮಹ್ಮೂದ್ ಉಸ್ತಾದ್ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಈ ನೇಮಕ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp