ಟಿ20 ವಿಶ್ವಕಪ್: ವಾರ್ನರ್ ಬಾರಿಸಿದ ಸಿಕ್ಸರ್ ಗೆ ಕ್ರಿಕೆಟ್ ವಲಯದಲ್ಲಿ ಭಾರೀ ಟೀಕೆ!

Prasthutha|

ವಾರ್ನರ್ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಿದ ಗಂಭೀರ್, ಹರ್ಭಜನ್

- Advertisement -

ದುಬೈ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನ ವಿರುದ್ಧ 5 ವಿಕೆಟ್ ಗಳ ಮಹತ್ವದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಓಪನರ್ ವಾರ್ನರ್ ಬಾರಿಸಿದ ಒಂದು ಸಿಕ್ಸರ್ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ 8ನೇ ಓವರ್ ಎಸೆಯಲು ಬಂದ ಪಾಕಿಸ್ತಾನದ ಮುಹಮ್ಮದ್ ಹಫೀಝ್, ಮೊದಲ ಎಸೆತದ ವೇಳೆ ಚೆಂಡು ಕೈಯಿಂದ ಜಾರಿತ್ತು. ಚೆಂಡು ಎರಡು ಬೌನ್ಸ್ ಆಗಿ ಡೆಡ್ ಆಗುವಷ್ಟರಲ್ಲಿ ಚೆಂಡನ್ನು ಗುರಿಯಾಗಿಸಿ ಮುನ್ನುಗ್ಗಿ ಬಂದ ವಾರ್ನರ್ ಅದನ್ನು ಸಿಕ್ಸರ್ ಗೆ ಅಟ್ಟಿದ್ದರು. ಹೀಗಾಗಿ ಅಂಪೈರ್ ಅದನ್ನು ಡೆಡ್ ಬಾಲ್ ಬದಲು ನೋ ಬಾಲ್ ಎಂದು ಘೋಷಿಸಿದ್ದರು.

- Advertisement -

ಕ್ರಿಕೆಟ್’ನಲ್ಲಿ ಬದಲಾದ ನಿಯಮದ ಪ್ರಕಾರ ಬಾಲ್ ಡೆಡ್ ಆಗಿದ್ದರೂ ಬ್ಯಾಟ್ಸ್ ಮನ್ ರನ್ ಗಳಿಸಲು ಪ್ರಯತ್ನಿಸದರೆ ರನ್ ನೀಡಲಾಗುತ್ತದೆ. ಸಾಮಾನ್ಯವಾಗಿ ಬ್ಯಾಟರ್’ಗಳು ಬಾಲ್ ಡೆಡ್ ಆದರೆ ಅದನ್ನು ಮುಟ್ಟುವ ಪ್ರಯತ್ನ ಮಾಡುವುದಿಲ್ಲ. ಆದರೆ ಟಿ-20ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಡೆಡ್ ಬಾಲ್ ಗೆ ಸಿಕ್ಸರ್ ಬಾರಿಸಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಒಳಪಟ್ಟಿದೆ.

ಹರ್ಭಜನ್ ಸಿಂಗ್, ಗೌತಮ್ ಗಂಭೀರ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು, ವಾರ್ನರ್ ಕ್ರೀಡಾಸ್ಫೂರ್ತಿಯನ್ನು ಮರೆತಿದ್ದಾರೆ ಎಂದು ಟೀಕಿಸಿದ್ದಾರೆ. ಈ ನಡುವೆ 2019ರ ಐಪಿಎಲ್ ನಲ್ಲಿ ನಡೆದ ಮಂಕಡ್ ಸಂದರ್ಭವನ್ನು ನೆನಪಿಸಿಕೊಂಡಿರುವ ಸ್ಪಿನ್ನರ್ ಆರ್. ಅಶ್ವಿನ್, ವಾರ್ನರ್ ಮಾಡಿದ್ದು ಸರಿಯಾದರೆ ನಾನು ಮಾಡಿದ್ದೂ ಸರಿ.. ವಾರ್ನರ್ ಮಾಡಿದ್ದು ತಪ್ಪಾದರೆ ನಾನು ಮಾಡಿದ್ದೂ ತಪ್ಪು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

Join Whatsapp