July 20, 2021

ಜೊಲ್ಲೆ ಜಾಹೀರಾತಿನಲ್ಲಿ ಯಡಿಯೂರಪ್ಪ ಮಾಯ!

ಬೆಂಗಳೂರು: ಇಂಡಿಯನ್ ಎಕ್ಸ್’ಪ್ರೆಸ್ ದೆಹಲಿ ಆವೃತ್ತಿಯಲ್ಲಿ ಯಡಿಯೂರಪ್ಪ ಸಂಪುಟದ ಸಚಿವೆ ಶಶಿಕಲಾ ಜೊಲ್ಲೆ ಅವರು ವೈಯಕ್ತಿಕ ಜಾಹೀರಾತೊಂದನ್ನು ನೀಡಿದ್ದು, ಪತ್ರಿಕೆಯ ಇಡೀ ಪುಟದಲ್ಲಿ ಬಿಜೆಪಿ ನಾಯಕರ ಫೋಟೋಗಳಿದ್ದರೂ ಯಡಿಯೂರಪ್ಪ ಅವರ ಫೋಟೋ ಇಲ್ಲದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.   

ಪತ್ರಿಕೆಯಲ್ಲಿ ಸಹಕಾರ ಖಾತೆ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿಗೆ ವಂದನೆಗಳನ್ನು ತಿಳಿಸಿದ ಶಶಿಕಲಾ ಜೊಲ್ಲೆ, ಸಹಕಾರ ಸಚಿವ ಸ್ಥಾನ ಪಡೆದ ಅಮಿತ್​ ಶಾ ಅವರನ್ನು ಅಭಿನಂದಿಸಿದ್ದಾರೆ. ಜೊತೆಗೆ ಕರ್ನಾಟಕಕ್ಕೆ 6 ಸಚಿವ ಸ್ಥಾನಗಳನ್ನು ದಯಪಾಲಿಸಿ, ರಾಜ್ಯಕ್ಕೆ ಗರಿಷ್ಠ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ನಡುವೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರ ಫೋಟೋ ಶಶಿಕಲಾ ಬ್ಯಾನರ್ ನಲ್ಲಿ ಹಾಕದೆ ಯಾಕೆ ಕಡೆಗಣಿಸಿದ್ದಾರೆ ಎಂಬುದು ದೇಶದಾದ್ಯಂತ ಚರ್ಚೆಯ ವಿಷಯವಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!