ಕೊಲೆ ಆರೋಪಿಯ ಮದುವೆಗೆ ಭೇಟಿ: DYSP, ಸಿಪಿಐ, PSI ಗಳಿಗೆ ಕಡ್ಡಾಯ ರಜೆ ಶಿಕ್ಷೆ

Prasthutha|

ಗಂಗಾವತಿ: ಕೊಲೆ ಆರೋಪದ ಹಿನ್ನೆಲೆ ಹೊಂದಿದ್ದ ರಾಜಕೀಯ ವ್ಯಕ್ತಿಯ ಮದುವೆ ಸಮಾರಂಭಕ್ಕೆ ಹಾಜರಾಗಿದ್ದ ಮೂವರು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ ನೀಡಲಾಗಿದೆ.

- Advertisement -

ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ಹನುಮೇಶ ನಾಯಕ ಅವರ ಪುತ್ರ ಆನಂದ್ ಎಂಬಾತನ ವಿವಾಹ ಸಮಾರಂಭಕ್ಕೆ ಈ ಅಧಿಕಾರಿಗಳು ಸಮವಸ್ತ್ರ ಸಮೇತ ಭೇಟಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

ಗಂಗಾವತಿ ಡಿ ವೈ ಎಸ್ ಪಿ ರುದ್ರೇಶ್ ಉಜ್ಜನಕೊಪ್ಪ, ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ಹಾಗೂ ಕನಕಗಿರಿ ಪಿ ಎಸ್ ಐ ತಾರಾಬಾಯಿ ಇವರಿಗೆ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಡಿಜೆ ಮತ್ತು ಐಜಿ ಪ್ರವೀಣ್ ಸೂದ್, ಐಜಿ ಮನೀಷ್ ಕರವೇಕರ ನಿರ್ದೇಶನದ ಮೆರೆಗೆ ಎಸ್ ಪಿ ಟಿ.ಶ್ರೀಧರ ಸೂಚನೆ ನೀಡಿದ್ದಾರೆ.

- Advertisement -

ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದಲ್ಲಿ ಹನುಮೇಶ ನಾಯಕ ಮತ್ತು ಬೆಂಬಲಿಗರ ಕೈವಾಡ ಇರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇನ್ನು ಈ ಪ್ರಕರಣ ನ್ಯಾಯಾಲಯದ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮದುವೆ ಸಮಾರಂಭಕ್ಕೆ ಭೇಟಿ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.

Join Whatsapp