ಕೊಪ್ಪಳ: ದೇಶದಲ್ಲಿ ಸಾಕಷ್ಟು ಅಧಿಕಾರಿಗಳಲ್ಲಿ RSS ಮನಸ್ಥಿತಿ ಇದೆ. ಇದಲ್ಲದೇ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಸೇರಿದಂತೆ ಹಲವು ಸ್ಥಾನಗಳಲ್ಲಿರುವವರು RSSನಿಂದ ಬಂದವರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, RSSನಿಂದ ಬಂದವರೂ ಅಧಿಕಾರಿಗಳು ಇದ್ದಾರೆ. RSS ಎನ್ನುವುದು ರಾಷ್ಟ್ರ ಪ್ರೇಮದ ಸಂಘಟನೆ. ಹಿಂದೂ ಸಂಸ್ಕೃತಿ ಉಳಿವಿಗಾಗಿ ಸ್ಥಾಪನೆಯಾದ ಸಂಘಟನೆ. ಅದು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಲ್ಲ. ನಾವೆಲ್ಲರೂ RSS ಮೂಲದಿಂದಲೇ ಬಂದಿದ್ದೇವೆ. ದೇಶದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿದ್ದವರೂ RSSನಿಂದ ಮೂಲದಿಂದ ಬಂದವರು ಎಂದಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡ್ತಾರೆ. ಆರ್‌ಎಸ್‌ಎಸ್ ಅನ್ನು ತಾಲಿಬಾನ್, ಅಪಘಾನಿಸ್ತಾನಕ್ಕೆ ಹೋಲಿಸ್ತಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ೭ ವರ್ಷವಾಗಿದೆ. ದೇಶದಲ್ಲಿ ಶಾಂತಿಯುತವಾಗಿ ಆಡಳಿತ ನಡೆದಿದೆ. ಅಪಘಾನಿಸ್ಥಾನದಲ್ಲಿ ಏನಾಗ್ತಿದೆ ಎನ್ನುವುದನ್ನು ವಿಪಕ್ಷಗಳು ನೋಡಲಿ ಎಂದು ಶೆಟ್ಟರ್ ಹೇಳಿದ್ದಾರೆ.