ವಸತಿ ನಿಲಯದ ಸಮಸ್ಯೆ ಬಗೆಹರಿಸುಂತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

Prasthutha|

ಬೆಂಗಳೂರು: ವಸತಿಗೃಹದ ಸಮಸ್ಯೆಗಳನ್ನು ಬಗೆಹರಿಸುಂತೆ ನಗರದ ವಿದ್ಯಾಪೀಠ ಹನುಮಂತ ನಗರ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

- Advertisement -


ವಸತಿ ನಿಲಯದ ಹಲವು ಸಮಸ್ಯೆಗಳನ್ನು ಬಗೆಹರಿಸುಂತೆ ಮತ್ತು ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ವಿಧ್ಯಾರ್ಥಿಗಳ ಹೋರಾಟಕ್ಕೆ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವ ವಹಿಸಿ ಹೋರಾಟ ಮಾಡಲಾಯಿತು ಎಂದು ಪರಿಷತ್ ನ ಮುಖಂಡರಾದ ಅಕ್ಷಯ್ ಹಾಜಿಮನಿ ತಿಳಿಸಿದರು.


ವಿಧ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿ ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಆಪ್ತ ಕಾರ್ಯದರ್ಶಿ ಎ. ಡಿ. ನಾಗೇಶ್ ಆಗಮಿಸಿ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುಹುದಾಗಿ ಭರವಸೆ ನೀಡಿದರು. ಒಂದು ವಾರದವರೆಗೆ ಕಾಲವಕಾಶ ಕೊಡಿ ಪ್ರಾಮಾಣಿಕವಾಗಿ ಇಲ್ಲಿಯ ಸಮಸ್ಯೆಗೆ ಪರಿಹಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಾದ ಚನ್ನಪ್ಪ ಚಾಲವಾದಿ, ಚರಣು ಮುಲಿಮನಿ, ವಸತಿ ನಿಲಯದ ವಿದ್ಯಾರ್ಥಿಗಳಾದ ಬಗವಂತರಾಯ ಹೊಸಮನಿ, ವಿನೋದ್ ಚವ್ಹಾಣ್, ತುಕಾರಾಮ, ಗುಂಡೂರಾವ್, ವಿಶಾಲ, ವಿನೋದ್ ಪೋದಾರ್, ಪ್ರಮೋದ್ ಮುಂತಾದವರು ಉಪಸ್ಥಿತರಿದ್ದರು.



Join Whatsapp