ಈಜಲು ಹೋದ ಮೂವರು ಬಾಲಕರು ನೀರುಪಾಲು !

Prasthutha|

ಜಗಳೂರು: ಈಜಲು ಹೋಗಿದ್ದ  ಮೂವರು ಬಾಲಕರು ನೀರಲ್ಲಿ ಮುಳುಗಿ  ಸಾವನ್ನಪ್ಪಿದ ಘಟನೆ ಜಗಳೂರುನಲ್ಲಿ ಶನಿವಾರ ನಡೆದಿದ್ದು, ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಲಾಗಿದೆ.

- Advertisement -

ಶೇಖಾವತ್ ಅವರ ಪುತ್ರರಾದ ಆಶಿಕ್ (10), ಅಫ್ರಾನ್‌ (8) ಹಾಗೂ ಅಬ್ದುಲ್ ಅವರ ಪುತ್ರ ಸೈಯದ್ ಫೈಜಾನ್ (9) ನೀರುಪಾಲದ ಬಾಲಕರು ಎಂದು ಗುರುತಿಸಲಾಗಿದೆ.

ಆಟವಾಡಲೆಂದು ಹೋಗಿದ್ದ ಬಾಲಕರು ರಾತ್ರಿಯಾದರೂ ವಾಪಸ್ ಆಗದಿದ್ದಾಗ ಅನುಮಾನಗೊಂಡ ಪೋಷಕರು ಹುಟುಕಾಟ ನಡೆಸಿದ್ದು, ಈ ವೇಳೆ ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

- Advertisement -

 ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp