ಕೇರಳ; ಶಿಕ್ಷಕರು ತಮ್ಮ ಇಚ್ಛೆಯ ವಸ್ತ್ರ ಧರಿಸಬಹುದು: ಸಚಿವೆ ಆರ್. ಬಿಂದು

Prasthutha|

ಕೊಚ್ಚಿ: ರಾಜ್ಯದ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕಿಯರು ತಮಗೆ ಇಷ್ಟವಿರುವ ಹಾಗೂ ಶಾಲಾ ವಾತಾವರಣಕ್ಕೆ ಒಪ್ಪುವ ವಸ್ತ್ರಗಳನ್ನು ಧರಿಸಬಹುದು ಎಂದು ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಹೇಳಿದ್ದಾರೆ.

- Advertisement -

ಶಾಲೆಗಳಲ್ಲಿ ಶಿಕ್ಷಕಿಯರು ಸಾರಿಯನ್ನ ಮಾತ್ರ ಧರಿಸಬೇಕು ಎಂಬ ನಿಯಮ ಪ್ರಗತಿಪರ ಚಿಂತನೆಯುಳ್ಳ ರಾಜ್ಯಕ್ಕೆ ಒಗ್ಗುವುದಿಲ್ಲ. ಕೇರಳದ ಶಿಕ್ಷಕರು ತಮಗೆ ಒಪ್ಪುವ ಹಾಗು ಹಾಗೂ ಇಷ್ಟಪಡುವ ವಸ್ತ್ರ ಧರಿಸಬಹುದಾಗಿದೆ ಎಂದು ಹೊಸ ಸರ್ಕ್ಯೂಲರ್’ನಲ್ಲಿ ಆದೇಶ ಹೊರಡಿಸಿದ್ದಾರೆ. ವಸ್ತ್ರಧಾರಣೆ ಎಂಬುದು ವೈಯಕ್ತಿಕ ವಿಚಾರ ಇದರಲ್ಲಿ ಯಾರ ಹಸ್ತಕ್ಷೇಪವು ಸಲ್ಲದು ಎಂದು ಹೇಳಿದ್ದಾರೆ.

ಶಿಕ್ಷಕಿಯರಿಗೆ ಎಲ್ಲಾ ಅರ್ಹತೆಗಳ ಜೊತೆಗೆ ಪ್ರತಿನಿತ್ಯ ಸಾರಿ ಧರಿಸುವುದನ್ನ ಕೆಲ ಶಾಲೆಗಳಲ್ಲಿ ಕಡ್ಡಾಯ ಮಾಡಲಾಗಿದೆ. ಯುವತಿಯರಿಗೆ ಇದು ಇಷ್ಟವಿಲ್ಲದಿದ್ದರೂ ಕೆಲಸದ ಅನಿವಾರ್ಯತೆಗಾಗಿ ಸಾರಿ ಧರಿಸಬೇಕಾದ ಸ್ಥಿತಿ ರಾಜ್ಯದಲ್ಲಿದೆ. ಇದು ಬದಲಾಗಬೆಕು. ಈ ಕುರಿತು ರಾಜ್ಯ ಸರ್ಕಾರದ ನಿಯಮಗಳನ್ನ ಹಲವು ಬಾರಿ ಸ್ಪಷ್ಟ ಪಡಿಸಲಾಗಿದೆ. ಶಿಕ್ಷಕಿಯರು ತಮಗೆ ಒಪ್ಪುವ ಹಾಗೂ ತಾವು ಇಷ್ಟಪಡುವ ವಸ್ತ್ರ ಧರಿಸಬಹುದಾಗಿದೆ. ಯಾವ ಆಡಳಿತ ಮಂಡಳಿಯೂ ಸಾರಿ ಧರಸಬೇಕು ಎಂದು ಒತ್ತಾಯಿಸುವಂತಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುವುದಾಗಿ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

Join Whatsapp