ಹಿಂದುತ್ವ- ಹಿಂದೂಯಿಸಂ ಎರಡೂ ಒಂದೇ ಅಲ್ಲ: ನಟಿ ರಮ್ಯಾ

Prasthutha|

ಬೆಂಗಳೂರು: ಹಿಂದುತ್ವ ಮತ್ತು ಹಿಂದೂಯಿಸಂ ಎರಡೂ ಒಂದೇ ಅಲ್ಲ, ಹಿಂದುತ್ವ ಎಂಬುದು ರಾಜಕೀಯವಾಗಿದೆ ಎಂದು ಸ್ಯಾಂಡಲ್‍ ವುಡ್ ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

- Advertisement -

ಈ ಬಗ್ಗೆ ಇನ್‍ಸ್ಟಾಗ್ರಾಮ್‍ ನಲ್ಲಿ ಪೋಸ್ಟ್  ಮಾಡಿದ ಅವರು, ಹಿಂದೂಯಿಸಂ ಎಂದರೆ ಎಲ್ಲರನ್ನೂ ಒಳಗೊಳ್ಳುವಂತದ್ದು ಮತ್ತು ಎಲ್ಲರಿಗೂ ಪ್ರೀತಿ ಹಂಚುವಂತದ್ದು. ಅದಕ್ಕೆ ವಿರುದ್ಧವಾದ್ದದ್ದೇ ಹಿಂದುತ್ವ. ನಿಜವಾದ ಹಿಂದುಗಳಿಗೆ ವ್ಯತ್ಯಾಸ ತಿಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.

- Advertisement -

ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಂಗ್ರೆಸ್ ಪಕ್ಷದ ಡಿಜಿಟಲ್ ಅಭಿಯಾನವಾದ ಜನ್ ಜಾಗರಣ ಅಭಿಯಾನದ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವೇನು? ಅವು ಒಂದೇ ಆಗಿರಬಹುದೇ? ಒಂದೇ ಆಗಿದ್ದರೆ, ಏಕೆ ಒಂದೇ ಹೆಸರಿಲ್ಲ? ವಿಭಿನ್ನ ವಿಷಯಗಳಾಗಿವೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ರಮ್ಯಾ ಕೂಡಾ ಮಾತನಾಡಿದ್ದಾರೆ.

Join Whatsapp