ಭಾರತದ ಆರ್ಥಿಕತೆಯ ಸ್ಥಿತಿಯು ತೀವ್ರ ಕಳವಳಕಾರಿ: ಪಿ. ಚಿದಂಬರಂ

Prasthutha|

ಹೊಸದಿಲ್ಲಿ: ಭಾರತದ ಆರ್ಥಿಕತೆಯ ಸ್ಥಿತಿಯ ಬಗ್ಗೆ “ತೀವ್ರ ಕಳವಳ” ವ್ಯಕ್ತಪಡಿಸಿದ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಹಣದುಬ್ಬರವು ಸ್ವೀಕಾರಾರ್ಹವಲ್ಲದ ಮಟ್ಟಕ್ಕೆ ಏರಿದೆ ಎಂದು ಶನಿವಾರ ಹೇಳಿದ್ದಾರೆ.

- Advertisement -

ಕಾಂಗ್ರೆಸ್  ನ ಚಿಂತನ ಮಂಥನದ ಎರಡನೇ ದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿದಂಬರಂ, ಸರ್ಕಾರವು ತನ್ನ ತಪ್ಪು ನೀತಿಗಳಿಂದ ಹಣದುಬ್ಬರವನ್ನು ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು.

“ಭಾರತದ ಆರ್ಥಿಕತೆಯ ಸ್ಥಿತಿಯು ತೀವ್ರ ಕಳವಳಕ್ಕೆ ಕಾರಣವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ನಿಧಾನಗತಿಯ ಬೆಳವಣಿಗೆಯು ಪ್ರಸ್ತುತ ಸರ್ಕಾರದ ವಿಶಿಷ್ಟ ಲಕ್ಷಣವಾಗಿದೆ. ಸಾಂಕ್ರಾಮಿಕ ನಂತರದ ಚೇತರಿಕೆಯು ಕಳಪೆ ಮಟ್ಟದ್ದಾಗಿದೆ. ಹಣದುಬ್ಬರವು ಸ್ವೀಕಾರಾರ್ಹವಲ್ಲದ ಮಟ್ಟಕ್ಕೆ ಏರಿದೆ, ಆದರೆ ಸರ್ಕಾರವು ತನ್ನ ತಪ್ಪು ನೀತಿಗಳಿಂದ ಬೆಲೆ ಏರಿಕೆಗೆ ಉತ್ತೇಜನ ನೀಡುತ್ತಿದೆ” ಎಂದು ಅವರು ಹೇಳಿದರು.



Join Whatsapp