ಗುಜರಾತಿನಲ್ಲಿ ಇಸ್ಲಾಮ್ ಸ್ವೀಕರಿಸಿದ ಆದಿವಾಸಿಗಳು: ಬಲವಂತದ ಮತಾಂತರದ ಆರೋಪದಲ್ಲಿ ಮುಸ್ಲಿಮ್ ವ್ಯಕ್ತಿಯನ್ನು ಬಂಧಿಸದಂತೆ ಸುಪ್ರೀಮ್ ತಡೆ

Prasthutha|

ಸೂರತ್: ಗುಜರಾತಿನ ಸೂರತ್ ಜಿಲ್ಲೆಯ ಭರೂಚ್ ಎಂಬಲ್ಲಿ ಆದಿವಾಸಿಗಳು ಇಸ್ಲಾಮ್ ಸ್ವೀಕರಿಸಿದ ಘಟನೆಗೆ ಸಂಬಂಧಿಸಿದಂತೆ ಬಲವಂತದ ಮತಾಂತರ ಆರೋಪದಲ್ಲಿ ಮುಸ್ಲಿಮ್ ವ್ಯಕ್ತಿಯನ್ನು ಬಂಧಿಸದಂತೆ ಸುಪ್ರೀಮ್ ಕೋರ್ಟ್ ಆದೇಶ ನೀಡಿದೆ.

- Advertisement -

ಭರೂಚ್ ಜಿಲ್ಲಾ ಮತ್ತು ಗುಜರಾತ್ ಹೈಕೋರ್ಟ್ ಬಲವಂತದ ಮತಾಂತರ ಪ್ರಕರಣದಲ್ಲಿ ಬಂಧನಕ್ಕೆ ಆದೇಶಿಸುವ ಸಾಧ್ಯತೆಯ ಬೆನ್ನಲ್ಲೇ ಅಬ್ದುಲ್ ವಹಾಬ್ ವರ್ಯವ ಎಂಬವರು ಸುಪ್ರೀಮ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ಅಬ್ದುಲ್ ವಹಾಬ್ ವಿರುದ್ಧ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಆರೋಪ ಹೊರಿಸಲಾಗಿತ್ತು. ಭರೂಚ್ ನ ಅಮೋದ್ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ದಾಖಲಾಗಿದ್ದ ಮತ್ತೊಂದು ಪ್ರಕರಣದಲ್ಲಿಯೂ ಅವರ ಹೆಸರನ್ನು ಸೇರಿಸಲಾಗಿತ್ತು.

- Advertisement -

ಸದ್ಯ ಅವರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 153 ಬಿ (1) (ಸಿ), 506 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಮಧ್ಯೆ ಅರ್ಜಿದಾರರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಯಾವುದೇ ವಾಮಮಾರ್ಗವನ್ನು ಅನುಸರಿಸಬಾರದು ಎಂದು ಸುಪ್ರೀಮ್ ಕೋರ್ಟ್ ಸೂಚಿಸಿದೆ.

ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು 37 ಹಿಂದೂ ಕುಟುಂಬ ಮತ್ತು 100 ಬುಡಕಟ್ಟು ಜನಾಂಗದವರನ್ನು ಆರ್ಥಿಕ ನೆರವು ಮತ್ತು ಆಮಿಷದ ಮೂಲಕ ಬಲವಂತದ ಮತಾಂತರ ಮಾಡಿದ್ದಾರೆ ಎಂದು ವಹಾಬ್ ವಿರುದ್ಧದ ಎಫ್.ಐ.ಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಈ ನಡುವೆ ತನ್ನ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಅಬ್ದುಲ್ ವಹಾಬ್ ಸುಪ್ರೀಮ್ ಕೋರ್ಟ್ ಗೆ ಅಫಿದಾವಿತ್ ಸಲ್ಲಿಸಿದ್ದಾರೆ.

Join Whatsapp