ಸಿಪಿಐಎಂ ನಾಯಕ ಸೀತಾರಾಮ್ ಯೆಚೂರಿ ಪುತ್ರ ಕೊರೋನಾಗೆ ಬಲಿ

Prasthutha|

ಹೊಸದಿಲ್ಲಿ : ದೇಶಾದ್ಯಂತ ಕೊರೋನಾ ವೈರಸ್ ಪ್ರಮಾಣ ಏರಿಕೆಯಾಗುತ್ತಿದ್ದು, ಒಂದೊಂದು ದಿನಕ್ಕೆ ಸಾವಿರಾರು ಜೀವಗಳು ಬಲಿಯಾಗುತ್ತಿವೆ. ಇದೀಗ ಸಿಪಿಐಎಂ ನಾಯಕ ಸೀತಾರಾಮ್ ಯೆಚೂರಿಯವರ ಪುತ್ರ ಆಶಿಶ್ ಯೆಚೂರಿ ಕೋವಿಡ್-19 ಸೋಂಕಿನಿಂದ ನಿಧನರಾಗಿದ್ದಾರೆ.

- Advertisement -

ಈ ಕುರಿತಂತೆ ಯೆಚೂರಿಯವರು ಟ್ವೀಟ್ ಮಾಡಿದ್ದು, ಇಂದು ಬೆಳಗ್ಗೆ ನನ್ನ ಹಿರಿಯ ಪುತ್ರ ಆಶಿಶ್ ಯೆಚೂರಿ ಕೋವಿಡ್ ನಿಂದ ನಿಧನರಾಗಿದ್ದಾರೆ ಎಂದು ತಿಳಿಸಲು ದುಃಖವಾಗುತ್ತಿದೆ. ಈ ಸಂದಿಗ್ದ ಪರಿಸ್ಥಿತಿಯಲ್ಲಿ ನನ್ನ ಮಗನಿಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು, ಕೊರೋನಾ ಮುಂಚೂಣಿ ಸೇವಕರು, ಶುಚಿತ್ವ ಕೆಲಸಗಾರರು ಮತ್ತು ನಮಗೆ ಧೈರ್ಯ, ಸಾಂತ್ವನ ಹೇಳಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Join Whatsapp