ನಾವು ಸಾವಿನ ಮನೆಯಲ್ಲಿದ್ರೂ ಬಿಜೆಪಿ ಸರಕಾರ ಮಾತ್ರ ಜಾಹೀರಾತು ಮೂಲಕ ಪ್ರಚಾರ ಪಡೆಯುತ್ತಿದೆ !

Prasthutha|

►ಕೋವಿಡ್ ನ ಈ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಕೋಟ್ಯಾಂತರ ರೂಪಾಯಿಗಳ ಜಾಹೀರಾತು!
►‘ಸಾವಿನ ಮನೆಯ ಜನರ ಭಾವನೆಗಳ ಚೆಲ್ಲಾಟವಾಡುತ್ತಿದೆ’ !

ಬೆಂಗಳೂರು : ಕೋವಿಡ್ ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ತೀವ್ರ ರೀತಿಯ ಆಕ್ರೊಶ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಫೇಸ್ ಒಂದು ಮತ್ತು ಎರಡನೇ ಹಂತಗಳಿಗೆ ಅನುದಾನ ಒದಗಿಸಿದ ಕೇಂದ್ರ ಸರಕಾರಕ್ಕೆ ಯಡಿಯೂರಪ್ಪ ನೇತೃತ್ವದ  ರಾಜ್ಯ ಸರಕಾರ ಧನ್ಯವಾದ ಸಲ್ಲಿಸಿರುವ ಜಾಹೀರಾತುಗಳು ಇರುವ ದಿನ ಪತ್ರಿಕೆಗಳನ್ನು ಮುಂದಿರಿಸಿಕೊಂಡು ರಾಜ್ಯ ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ನಾವಿಂದು ಸಾವಿನ ಮನೆಯಲ್ಲಿದ್ರೂ ಬಿಜೆಪಿಯ ಮೂರ್ಖ ಸರಕಾರ ಮಾತ್ರ ಪ್ರಚಾರ ಬಯಸುತ್ತಿದೆ. ರಾಜ್ಯದಲ್ಲಿ ಬೆಡ್ ಗಳಿಲ್ಲ, ಆಕ್ಸಿಜನ್ ಗಳಿಲ್ಲ ಎಂದು ಹೇಳುತ್ತಿರುವ ಮಧ್ಯೆಯೇ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಅವಶ್ಯಕತೆಯಿತ್ತೇ ಎಂದವರು ಪ್ರಶ್ನಿಸಿದ್ದಾರೆ.

- Advertisement -

ಬೆಂಗಳೂರು ಮೆಟ್ರೋಗೆ ಕೇಂದ್ರ ಕೊಟ್ಟಿರುವ ಅನುದಾನ ರಾಜ್ಯಕ್ಕೆ ನೀಡಿರುವ ಭಿಕ್ಷೆಯಲ್ಲ. ರಾಜ್ಯವಿಂದು ಕೋವಿಡ್ ನ ವಿಷಮ ಪರಿಸ್ಥಿತಿಯಲ್ಲಿರುವಾಗ ಈ ರೀತಿ ಕೋಟ್ಯಂತರ ಹಣ ಖರ್ಚು ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡಬೇಕಿತ್ತೇ? ಆ ಮೂಲಕ ನಾಡಿನ ಜನತೆಗೆ ಯಾವ ಸಂದೇಶ ನೀಡಲು ಬಯಸುತ್ತಿದೆ. ಸರಕಾರ ರಾಜ್ಯದ ಜನತೆಯ ಸಾವಿನ ಮನೆಯಲ್ಲಿ ಚೆಲ್ಲಾಟವಾಡುತ್ತಿದೆ. ಈಗಲಾದರೂ ಈ ಮೂರ್ಖ ಸರಕಾರ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ರಾಜ್ಯದ ಜನತೆ ರೊಚ್ಚಿಗೇಳುವ ದಿನ ದೂರವಿಲ್ಲ ಎಂದವರು ಹೇಳಿದ್ದಾರೆ.

- Advertisement -