ಜಾಗತಿಕ ಇಸ್ಲಾಮಿಕ್ ವಿಧ್ವಾಂಸ ಮೌಲಾನಾ ವಹಿದುದ್ದೀನ್ ಖಾನ್ ನಿಧನ

Prasthutha|

ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಇಸ್ಲಾಮಿಕ್ ವಿದ್ವಾಂಸ, ಚಿಂತಕ ಮೌಲಾನಾ ವಹಿದುದ್ದೀನ್ ಖಾನ್ (96) ಬುಧವಾರ ಹೊಸದಿಲ್ಲಿಯ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

- Advertisement -

ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ವಹಿದುದ್ದೀನ್ ಖಾನ್ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

1925 ಜನವರಿಯಲ್ಲಿ ಉತ್ತರ ಪ್ರದೇಶದ ಅಝಂಗಢ ಜಿಲ್ಲೆಯ ಒಂದು ಚಿಕ್ಕ ಹಳ್ಳಿಯಲ್ಲಿ ಜನಿಸಿದ ಮೌಲಾನಾ ವಹಿದುದ್ದೀನ್ ಖಾನ್ ಇಸ್ಲಾಂ ಧರ್ಮ, ಆಧ್ಯಾತ್ಮಿಕತೆ ಮತ್ತು ಸಹಬಾಳ್ವೆ ಸೇರಿದಂತೆ 200 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಪವಿತ್ರ ಕುರ್‌ಆನ್‌ನ ವ್ಯಾಖ್ಯಾನವನ್ನು ಬರೆದಿದ್ದ ಅವರು ವಿಶ್ವದ 500 ಅತ್ಯಂತ ಪ್ರಭಾವಶಾಲಿ ಮುಸ್ಲಿಮರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

- Advertisement -

ಭಾರತ ಸರ್ಕಾರವು ಅಧ್ಯಾತ್ಮಿಕ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಭಾರತದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.  ಅವರು 2000ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಪಡೆದಿದ್ದರು. ಅವರು 1970ರಲ್ಲಿ ದಿಲ್ಲಿಯಲ್ಲಿ ಇಸ್ಲಾಮಿಕ್ ಸೆಂಟರ್ ಸ್ಥಾಪಿಸಿ ಆರು ವರ್ಷಗಳ ಬಳಿಕ ಅಲ್ –ರಿಸಾಲಾ ಎಂಬ ಮಾಸಿಕ ಪತ್ರಿಕೆಯನ್ನು ಆರಂಭಿಸಿದ್ದರು. ಅಲ್- ರಿಸಾಲಾ ಮಾಸ ಪತ್ರಿಕೆಯು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಸಾರವಾಗುತ್ತಿತ್ತು.

Join Whatsapp