ಮತ್ತೆ ಎದ್ದು ನಿಂತ ಪಂಪ್ವೆಲ್ ಹಳೆಯ ಸರ್ಕಲ್!

Prasthutha|

ಮಂಗಳೂರು: ಪಂಪ್ ವೆಲ್ ಮಹಾವೀರ ಸರ್ಕಲ್ ಕಣ್ಮರೆಯಾಗಿ ವರ್ಷಗಳು ಕಳೆದಿದೆ. ಹೊನ್ನಬಣ್ಣದ ಕಲಶ, ಸುತ್ತಲೂ ಹಸಿರು ಹುಲ್ಲಿನ ಮೆದು ಮೆತ್ತನೆಯ ವೃತ್ತ ಎಲ್ಲವೂ ನೆನಪು ಮಾತ್ರ. ಆದರೆ ಇದೀಗ ಮತ್ತೊಮ್ಮೆ ಅದೇ ಪಂಪ್ ವೆಲ್ ಸರ್ಕಲ್ ಮತ್ತೆ ಪ್ರತ್ಯಕ್ಷ ಆಗಿದೆ. ನಗರದ ಫಿಝಾ ಬೈ ನೆಕ್ಸಸ್ ಮಾಲ್ ನಲ್ಲಿ ಪಂಪವೆಲ್ ಸರ್ಕಲ್ ಕಂಡು ಬಂದಿದೆ.

- Advertisement -

ಪಂಪ್ ವೆಲ್ ಸರ್ಕಲ್ ಪ್ರತಿಕೃತಿ ಇದು. ಪಂಪ್ ವೆಲ್ ಸರ್ಕಲ್ ಕಣ್ಣೆದುರು ನಿಂತ ಹಾಗಿದೆ. ಮಂಗಳೂರು ದಸರಾ ಸಂದರ್ಭ ಮಹಾವೀರ ಸರ್ಕಲ್ ಹೇಗೆ ಅಲಂಕೃತವಾಗುತ್ತಿತ್ತೋ ಅದೇ ರೀತಿ ಇಲ್ಲೂ ಅಲಂಕಾರ ಮಾಡಲಾಗಿದೆ. ಕಲಶದ ಬಲಬದಿಯಲ್ಲಿ ತೆಂಕುತಿಟ್ಟು ಯಕ್ಷಗಾನದ ಪುಂಡುವೇಷ ಹಾಗೂ ಎಡಗಡೆ ಥಾಲೀಂ ಹಿಡಿದ ಹುಲಿವೇಷದ ಪ್ರತಿಕೃತಿಯನ್ನು ಇರಿಸಲಾಗಿದೆ. ಇದರ ಜೊತೆಗೆ ಪಂಪ್ ವೆಲ್ ಸರ್ಕಲ್ ನ ವಿಚಾರ ಇರುವ ಬರಹದ ಫಲಕವನ್ನು ಅಳವಡಿಸಲಾಗಿದೆ.

ಜನರು ತಮ್ಮ ಮಾಸದ ನೆನಪಿನ ಸರ್ಕಲ್ ನ ಪ್ರತಿಕೃತಿಯ ಫೋಟೋ ತೆಗೆದುಕೊಳ್ಳುತ್ತಾ, ಸೆಲ್ಫೀ ತೆಗೆದುಕೊಳ್ಳುತ್ತಾ ಸಂತೋಷ ಪಡುತ್ತಿದ್ದಾರೆ.

- Advertisement -