ಪಾಕಿಸ್ತಾನಕ್ಕೆ ಬೆಂಬಲ ಕೊಡೋಕೆ ಹೋಗಿದ್ರಾ?: ಸಿಎಂಗೆ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆ

Prasthutha|

ಬೆಂಗಳೂರು: ರಾಜ್ಯದಲ್ಲಿ ಜನ ಸಮಸ್ಯೆಯಿಂದ ಬಳಲುತ್ತಿದ್ದರೆ ಇವರು ಕ್ರಿಕೆಟ್ ಮ್ಯಾಚ್ ನೋಡೊಕೆ ಹೋಗಿದ್ದಾರೆ. ಅಲ್ಲೇನು ಪಾಕಿಸ್ತಾನಕ್ಕೆ ಬೆಂಬಲ ಕೊಡೋಕೆ ಹೋಗಿದ್ರಾ? ಅಥವಾ ಆಸ್ಟ್ರೇಲಿಯಾಗೆ ಬೆಂಬಲ ಕೊಡೋಕೆ ಹೋಗಿದ್ರಾ? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

- Advertisement -


ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜನ ಸಮಸ್ಯೆಯಿಂದ ಬಳಲುತ್ತಿದ್ದರೆ ಇವರು ಕ್ರಿಕೆಟ್ ಮ್ಯಾಚ್ ನೋಡೊಕೆ ಹೋಗಿದ್ದಾರೆ. ಭಾರತ ತಂಡ ಆಡುವಾಗ ಬೆಂಬಲ ಕೊಡುತ್ತಿದ್ದರೆ ಪರವಾಗಿಲ್ಲ. ಆದ್ರೆ ಬೇರೆ ಮ್ಯಾಚ್ ನೋಡೋದಕ್ಕೆ ಇಡೀ ಸಿಎಂ, ಡಿಸಿಎಂ, ಪಟಾಲಂ ಹೋಗಿದೆ. ಬರದ ಸಮಸ್ಯೆ ಇದ್ದರು ಮ್ಯಾಚ್ ನೋಡೋಕೆ ಹೋಗೋದು ಎಷ್ಟು ಸರಿ? ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.