ಉಡುಪಿ ಮಲ್ಪೆಯಲ್ಲಿ ಒಂದು ಮೀನಿನ ಬೆಲೆ 1 ಲಕ್ಷದ 90 ಸಾವಿರ ರೂಪಾಯಿ!

Prasthutha|

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಹೊರಟ ಮೀನುಗಾರರ ತಂಡದ ಬಲೆಗೆ ಅಪರೂಪದ ಮೀನು ಬಲೆಗೆ ಬಿದ್ದಿದ್ದು, ಆ ಒಂದು ಮೀನು ಬರೋಬ್ಬರಿ ಒಂದು ಲಕ್ಷದ ತೊಂಬತ್ತು ಸಾವಿರ ರೂಪಾಯಿಗೆ ಮಾರಾಟವಾಗಿ ಮಲ್ಪೆ ಬಂದರಿನಲ್ಲಿ ದಾಖಲೆ ನಿರ್ಮಿಸಿದೆ.

- Advertisement -


ಸೋಮವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಶಾನ್ ರಾಜ್ ತೊಟ್ಟಂ ಎಂಬುವವರ ಬಲರಾಮ್ ಎಂಬ ಹೆಸರಿನ ಬೋಟ್‌ಗೆ ಈ ಅದೃಷ್ಟ ಒಲಿದಿದೆ. ಅವರ ಬಲೆಗೆ 21 ಕೆಜಿ ತೂಕದ ಅಪರೂಪದ ಗೋಳಿ ಅನ್ನುವ ಭಾರಿ ಬೆಲೆಬಾಳುವ ಮೀನು ಸೆರೆ ಸಿಕ್ಕಿದ್ದು, ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಈ ಮೀನು ಹರಾಜು ಪ್ರಕ್ರಿಯೆ ನಡೆದಿದಾಗ 1.90,260 ರೂ.ಗೆ ಮಾರಾಟ ಆಗಿದೆ. ಇದು ಅಪರೂಪವಾದ ಮೀನಾಗಿದ್ದು. ಪ್ರತಿ ಕೆಜಿಗೆ 9060 ರೂಪಾಯಿಯಂತೆ ಮಾರಾಟವಾಗಿದೆ. ಈ ಮೀನು ಕಲ್ಲು ಬಂಡೆಗಳ ಅಡಿಯಲ್ಲಿ ವಾಸವಾಗುತ್ತಿದ್ದು, ಮೀನುಗಾರರ ಬಲೆಗೆ ಬೀಳೋದು ಬಲು ಅಪರೂಪವಾಗಿದೆ.

- Advertisement -


ಗೋಳಿ ಮೀನನ್ನು ಅತೀ ಹೆಚ್ಚಾಗಿ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಮಧುಮೇಹ, ಅಸ್ತಮಾದಂತಹ ಖಾಯಿಲೆಗಳ ಔಷಧಿಗೆ ಈ ಮೀನನ್ನು ಬಳಸಲಾಗುತ್ತದೆ. ಬಿಸಿರೋಡ್ ಫಯಾಝ್ ಎಂಬವರು ಈ ಮೀನನ್ನು ಮಲ್ಪೆ ಬಂದರಿನಿಂದ ಹರಾಜಿನಲ್ಲಿ ಖರೀದಿಸಿದ್ದಾರೆ. ಈ ಮೀನನ್ನು ಮುಂಬೈ ಮೀನುಗಾರಿಕಾ ಬಂದರಿನಲ್ಲಿ ಮಾರಾಟ ಮಾಡುತ್ತಾರೆಂದು ಹೇಳಲಾಗಿದೆ. ಮುಂಬೈ ಯಲ್ಲಿ ಈ ಮೀನು ಪ್ರತೀ ಕೆಜಿಗೆ ಹದಿನೈದು ಸಾವಿರದಿಂದ ಹದಿನೆಂಟು ಸಾವಿರ ರೂ. ವರೆಗೂ ಮಾರಾಟವಾಗಲಿದೆ. ಮುಂಬೈನಿಂದ ನೇರ ಔಷಧ ಕಂಪೆನಿಗಳೇ ಈ ಮೀನನ್ನು ಖರೀದಿ ಮಾಡುತ್ತವೆ.


ಉಡುಪಿಯ ಮಲ್ಪೆ ಬಂದರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಮೀನು ಇಷ್ಟೊಂದು ಬೆಲೆಗೆ ಮಾರಾಟವಾಗಿದೆ. ಈ ಹಿಂದೆ ಗೋಳಿ ಜಾತಿಯ ಮೀನುಗಳು ಸಿಕ್ಕಿದ್ದರೂ ಅವು ಸಣ್ಣ ಗಾತ್ರದ್ದಾಗಿದ್ದವು.

https://www.youtube.com/watch?v=RaNqxum3nGE

Join Whatsapp