ಲಕ್ನೋ: ಪತ್ರಕರ್ತನ ಕೈಗೆ ಕೋಳ ತೊಡಿಸಿ ಕರೆದೊಯ್ದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಸಚಿವರಾದ ಗುಲಾಬೋ ದೇವಿ ಅವರನ್ನು ಪ್ರಶ್ನಿಸಿದ ಪತ್ರಕರ್ತ ಸಂಜಯ್ ರಾಣಾ ಎಂಬವರ ಕೈಗೆ ಕೈಕೋಳ ತೊಡಿಸಿ ಹಗ್ಗದಿಂದ ಕಟ್ಟಿ ಕರೆದೊಯ್ಯುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತ ಸಂಜಯ್ ಅವರು ಸಚಿವರನ್ನು ಉದ್ದೇಶಿಸಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದರು. ಮಾತ್ರವಲ್ಲ ನೀವು ಆಶ್ವಾಸನೆ ನೀಡಿದ ಅಭಿವೃದ್ಧಿ ಕಾರ್ಯ ಗ್ರಾಮದಲ್ಲಿ ನಡೆದಿದಲ್ಲ ಎಂದು ಆರೋಪಿಸಿದ್ದರು.