ದಾಖಲೆ ಪತ್ರಕ್ಕೆ ಸಹಿ ಹಾಕಲು ಹೋಗಿದ್ದಾಗ ಗ್ರಾಮ ಪ್ರಧಾನ್’ನಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ

Prasthutha|

ಲಕ್ನೋ: ಉತ್ತರ ಪ್ರದೇಶದ ಗೊಂಡ ಜಿಲ್ಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ತನ್ನ ದಾಖಲೆ ಪತ್ರಗಳಿಗೆ ಸಹಿ ಪಡೆಯಲು ಗ್ರಾಮ ಪ್ರಧಾನ್ ಬಳಿಗೆ ಹೋಗಿದ್ದಾಗ ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದೆ.
“ನನ್ನ ಆಧಾರ್ ಕಾರ್ಡ್’ನಲ್ಲಿ ತಿದ್ದುಪಡಿ ಇದ್ದುದರಿಂದ ಗ್ರಾಮ ಪ್ರಧಾನರ ಸಹಿ ಮಾಡಿ ಅದನ್ನು ಸರಿಪಡಿಸಲು ಅಗತ್ಯವಿತ್ತು. ನಾನು ಕಚೇರಿಗೆ ತೆರಳಿದ ಕೂಡಲೆ ಬಾಗಿಲು ಭದ್ರಪಡಿಸಿ ಆತ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ” ಎಂದು ಹುಡುಗಿ ತಿಳಿಸಿದ್ದಾಳೆ. ಕೂಡಲೆ ಸಂತ್ರಸ್ತೆ ಪೊಲೀಸ್ ಠಾಣೆಗೆ ಹೋದಳಾದರೂ ಅವರು ಆಕೆಯ ಮಾತು ಕೇಳಲು ತಯಾರಿರಲಿಲ್ಲ.
ಇಲ್ಲಿ ಅತ್ಯಾಚಾರಿಯು ಪೊಲೀಸರಿಗೆ ಲಂಚ ನೀಡಿರುವುದು ಸ್ಪಷ್ಟವಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ.
“ಅವರು ಪೊಲೀಸರಿಗೆ ಹಣ ಕೊಟ್ಟಿರುವುದಲ್ಲದೆ ನಮಗೂ ಹಣ ಕೊಡಲು ಬಂದರು” ಬಾಯಿ ಮುಚ್ಚಿಕೊಂಡಿರಲು 20 ಲಕ್ಷದವರೆಗೂ ಹಣ ನೀಡಲು ಅವರು ಮುಂದೆ ಬಂದಿದ್ದಾರೆ ಎಂದು ಆರೋಪಿಸಿದ್ದಾಳೆ.
ಅದಲ್ಲದೆ ಆರೋಪಿ ರಾಹುಲ್ ಸಿಂಗ್, ಪ್ರಧಾನ್ ಸಿಂಗ್, ಸುಶಾಂತ್ ಸಿಂಗ್, ಓಂ ಪ್ರಕಾಶ್ ಸಂತ್ರಸ್ತೆಯ ಮನೆಗೆ ಗನ್ ತೆಗೆದುಕೊಂಡು ಹೋಗಿ ಬೆದರಿಸಿದ್ದಾರೆ.
“ನಾನು ಮತ್ತೊಮ್ಮೆ ಪೊಲೀಸರ ಬಳಿ ಹೋದೆನಾದರೂ ಅವರಾರೂ ನನ್ನ ಮಾತಿಗೆ ಕಿವಿಗೊಡಲು ತಯಾರಿಲ್ಲ” ಎಂದು ಸಂತ್ರಸ್ತೆ ದೂರಿದ್ದಾಳೆ.
“ಅತ್ಯಾಚಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರರಲ್ಲಿ ಹೇಳಿದರೆ ಅವರು ನಮ್ಮನ್ನು ಮನಸ್ಸಿಗೆ ಬಂದಂತೆ ಬಯ್ದಿದ್ದಾರೆ” ಎಂದೂ ಸಂತ್ರಸ್ತ ಹುಡುಗಿ ಹೇಳಿದ್ದಾಳೆ.

Join Whatsapp