ಅನ್ಯ ಧರ್ಮಗಳ ಆಚಾರಗಳಿಗೆ ಅಗೌರವ ಕೊಡುವುದು ಹಿಂದೂ ಧರ್ಮಕ್ಕೆ ಮಾಡುವ ದ್ರೋಹ: ಈಶ್ವರಪ್ಪ ವಿರುದ್ಧ ಡಾ.ಸುಮತಿ ಹೆಗ್ಡೆ ಕಿಡಿ

Prasthutha|

ಮಂಗಳೂರು: ಒಂದು ಧರ್ಮದಲ್ಲಿದ್ದುಕೊಂಡು ಇನ್ನೊಂದು ಧರ್ಮದ ಆಚಾರ- ವಿಚಾರಗಳಿಗೆ ಅಗೌರವ ಕೊಡುವುದು ಎಲ್ಲಷ್ಟೂ ಸರಿಯಲ್ಲ. ಆಝಾನ್ ವಿಷಯದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರವರು ನೀಡಿರುವ ಹೇಳಿಕೆಗೆ ಅವರು ಅಲ್ಪಸಂಖ್ಯಾತ ಮುಸ್ಲಿಮರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಇವರನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜೆಡಿಎಸ್ ಮುಖಂಡೆ, ಮಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸುಮತಿ ಹೆಗ್ಡೆ ಆಗ್ರಹಿಸಿದ್ದಾರೆ.

- Advertisement -


ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತ್ತೀಚೆಗೆ ಮಂಗಳೂರಿನಲ್ಲಿ ಬಿಜೆಪಿಯ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಇಸ್ಲಾಮ್ ಧರ್ಮದ ಬಗ್ಗೆ ಟೀಕಿಸಿ ದೇವರ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ಈಶ್ವರಪ್ಪ ಅವರ ನಿಲುವು ಹಿಂದೂ ಧರ್ಮಕ್ಕೆ ಅಪಚಾರವೆಸಗಿದಂತಿದೆ. ಹಿಂದೂ ಧರ್ಮದಲ್ಲೂ ಎಲ್ಲೂ ಇನ್ನೊಂದು ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಲು ಎಲ್ಲಿಯೂ ಹೇಳಲಿಲ್ಲ. ಅದಲ್ಲದೆ ದೇವರು ಎಲ್ಲರಿಗೂ ಒಂದೇ . ಅವರವರ ಧರ್ಮದಲ್ಲಿ ಬೇರೆ ಬೇರೆ ಹೆಸರಲ್ಲಿ ದೇವರನ್ನು ಕರೆಯುತ್ತಾರೆ ಅಷ್ಟೇ. ಪರಮಾತ್ಮನನ್ನು ಅವಹೇಳನ ಮಾಡುವಂತಹ ಕೀಳುಮಟ್ಟದ ಹೇಳಿಕೆ ಕೊಡುವುದೆಂದರೆ ಅವರ ಘನತೆಗೆ ಯೋಗ್ಯವಲ್ಲದ ವಿಚಾರ. ಇದು ಅವರ ಸಣ್ಣತನಕ್ಕೆ ನಿದರ್ಶನವಾಗಿದೆ. ಈ ವಿಚಾರದಲ್ಲಿ ಈಶ್ವರಪ್ಪರವರು ಅಲ್ಪಸಂಖ್ಯಾತ ಮುಸ್ಲಿಮರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಇವರನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.



Join Whatsapp