ಬೆಂಗಳೂರು ಹೊರ ವಲಯಕ್ಕೂ ವ್ಯಾಪಿಸಿದ PAYCM ಅಭಿಯಾನ

Prasthutha|

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಪೇ ಸಿಎಂ ಪೋಸ್ಟರ್ ಕಾಲಿಟ್ಟಿದ್ದು ನೆಲಮಂಗಲ ನಗರ ವ್ಯಾಪ್ತಿಯಲ್ಲಿ ಪೇ ಸಿಎಂ ಪೋಸ್ಟರ್ ಗಳನ್ನು ನೆಲಮಂಗಲ ನಗರಸಭೆ ನೆಲಮಂಗಲ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಗೋಡೆಗಳ ಮೇಲೆ ರಾತ್ರೋ ರಾತ್ರಿ ಹಂಟಿಸಲಾಗಿತ್ತು. ಇದರ ವಿರುದ್ಧ ಕಾರ್ಯಪ್ರವೃತ್ತರಾದ ನೆಲಮಂಗಲ ಪೊಲೀಸರು ಪೇ ಸಿಎಂ ಪೋಸ್ಟರ್ ಅಂಟಿಸುತಿದ್ದ ಮೂವರು ಯುವಕರನ್ನು ಬಂಧಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನಾಯಕರು ಬಂಧಿತ ಯುವಕರನ್ನು ಬಿಡಿಸಲು ತೀವ್ರ ಪ್ರಯತ್ನ ನಡೆಸಿದ್ದು, ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿಯದ ನೆಲಮಂಗಲ ನಗರ ಪೊಲೀಸರು ಪೇ ಸಿಎಂ ಪೋಸ್ಟ್ ಅಂಟಿಸುತ್ತಿದ್ದ ಯುವಕರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

- Advertisement -

PAYCM ಪೋಸ್ಟರ್ ಸಮರ ಇನ್ನಷ್ಟು ತೀವ್ರವಾಗಿದ್ದು, ಸಂಜೆ 4 ಗಂಟೆ ನಂತರ PAYCM ಪೋಸ್ಟರ್ ಅಭಿಯಾನ ಶುರುವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ್ಧಾರೆ.

ಡಿಕೆಶಿ ಕಾಂಗ್ರೆಸ್ MLA, MLCಗಳ ಸಭೆಯಲ್ಲಿ ಕರೆ ನೀಡಿದ್ದು, ಸಂಜೆ 4 ಗಂಟೆಗೆ ಎಲ್ಲರೂ ಬರುವಂತೆ ಬುಲಾವ್ ನೀಡಿದ್ಧಾರೆ.

- Advertisement -