ಮಳೆಯಿಂದ ಈರುಳ್ಳಿ ಬೆಳೆ  ಸಂಪೂರ್ಣ ನಾಶ; ಮನನೊಂದು ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ರೈತ

Prasthutha|

ಚಿಕ್ಕಮಗಳೂರು : ಮಳೆಯಿಂದ ಈರುಳ್ಳಿ ಬೆಳೆ  ಸಂಪೂರ್ಣ ನಾಶವಾದ ಹಿನ್ನೆಲೆಯಲ್ಲಿ ಮನನೊಂದ ರೈತರೊಬ್ಬರು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ಘಟನೆ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ.

ರೈತ ಮಂಜುನಾಥ್ ಸುಮಾರು 3-4 ಲಕ್ಷ ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿ ಬೆಳೆ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸಂಪೂರ್ಣ  ನಾಶವಾಗಿತ್ತು.

- Advertisement -

ಹಣ ಬೇಡ ಕಿತ್ತುಕೊಂಡು ಹೋಗಿ ಎಂದು ಹೇಳಿದರೂ ಕೀಳುವವರು ಯಾರೂ ಇಲ್ಲ. ಈರುಳ್ಳಿ ಸೈಜ್ ಬೆಳ್ಳುಳ್ಳಿಯಂತಿದ್ದು, ಕಿತ್ತರೆ ಕೂಲಿಗೂ ಆಗೋದಿಲ್ಲ ಎಂದು ಮನನೊಂದ ರೈತ ಬೆಳೆ ಮೇಲೆ ಟ್ರ್ಯಾಕ್ಟರ್ ಚಾಲನೆ ಮಾಡಿದ್ದಾರೆ.

- Advertisement -