ಅ.1ರಿಂದ ಹೊಸ ಜನನ ಪ್ರಮಾಣ ಕಾಯ್ದೆ ಜಾರಿ

Prasthutha|

ಹೊಸದಿಲ್ಲಿ: ಮುಂದಿನ ತಿಂಗಳ 1ರಿಂದ ಜನನ ಪ್ರಮಾಣ ಪತ್ರ ವಿತರಣೆಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆ ಜಾರಿಯಾಗಲಿದೆ. ಕಳೆದ ತಿಂಗಳು ಮುಕ್ತಾಯವಾದ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯ್ದೆ 2023ಕ್ಕೆ ಸಂಸತ್‌ ಅನುಮೋದನೆ ನೀಡಿತ್ತು.

- Advertisement -

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆ.11ರಂದು ಅದಕ್ಕೆ ಸಹಿಯನ್ನೂ ಹಾಕಿದ್ದರು. ಹೊಸ ಕಾಯ್ದೆಯ ಜಾರಿಯಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು, ಡ್ರೈವಿಂಗ್‌ ಲೈಸನ್ಸ್‌ ಪಡೆಯಲು, ಆಧಾರ್‌ ಮತ್ತು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಲು, ವಿವಾಹ ನೋಂದಣಿಗಾಗಿ ಏಕಹಂತದ ದಾಖಲೆಯಾಗಿ ಬಳಕೆ ಮಾಡಲು ಅನುಕೂಲವಾಗಲಿದೆ.



Join Whatsapp