ಬಾಲಿವುಡ್‌ ನಟ ರಿಯೋ ಕಪಾಡಿಯಾ ನಿಧನ

Prasthutha|

ಮುಂಬೈ: “ದಿಲ್‌ ಚಾಹ್ತಾ ಹೈ”, “ಚಕ್‌ ದೇ! ಇಂಡಿಯಾ”, “ಹ್ಯಾಪಿ ನ್ಯೂ ಇಯರ್‌” ಮುಂತಾದ ಸಿನಿಮಾಗಳ ಮೂಲಕ ಮನೆ ಮಾತಾಗಿದ್ದ ಬಾಲಿವುಡ್‌ ನಟ ರಿಯೋ ಕಪಾಡಿಯಾ(66) ಗುರುವಾರ ನಿಧನರಾಗಿದ್ದಾರೆ.

- Advertisement -

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮಧ್ಯಾಹ್ನ 12.30ರ ವೇಳೆಗೆ ಮುಂಬೈನಲ್ಲಿ ಇಹಲೋಕ ತ್ಯಜಿಸಿರುವುದಾಗಿ ಅವರ ಸ್ನೇಹಿತ ಫೈಸಲ್‌ ಮಲಿಕ್‌ ತಿಳಿಸಿದ್ದಾರೆ. ಸಿನಿಮಾಗಳು ಮಾತ್ರವಲ್ಲದೇ ಹಲವು ಧಾರಾವಾಹಿಗಳಲ್ಲೂ ಕಪಾಡಿಯಾ ಅವರು ಪೋಷಕ ಪಾತ್ರಗಳನ್ನು ಮಾಡಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.