ಬುದ್ಧ ವಿಷ್ಣುವಿನ ಅವತಾರ, ನಾನು ಬುದ್ಧನ ಅನುಯಾಯಿ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

Prasthutha|

ಆದಿಶಂಕರಾಚಾರ್ಯರ ಪರ ಹೇಳಿಕೆ ವಿವಾದವಾಗುತ್ತಿದ್ದಂತೆ ಯೂ ಟರ್ನ್ ಹೊಡೆದ ಕೆ. ಸುಧಾಕರ್

- Advertisement -

ಬೆಂಗಳೂರು: ಬುದ್ಧ ವಿಷ್ಣುವಿನ ಅವತಾರವಾಗಿದ್ದು, ನಾನು ಆತನ ಅನುಯಾಯಿಯಾಗಿದ್ದೇನೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಆದಿಶಂಕರಚಾರ್ಯರ ಪರ ಹೇಳಿಕೆ ನೀಡುವ ಭರದಲ್ಲಿ ಬುದ್ಧನ ವಿರುದ್ಧ ನೀಡಿದ್ದ ಹೇಳಿಕೆ ವಿವಾದವಾಗುತ್ತಿದ್ದಂತೆ ಆರೋಗ್ಯ ಸಚಿವ ಕೆ.ಸುಧಾಕರ್ ಯೂ ಟರ್ನ್ ಹೊಡೆದಿದ್ದಾರೆ.

- Advertisement -

ಇತ್ತೀಚೆಗೆ ನಡೆದ ಬ್ರಾಹ್ಮಣ ಸಮುದಾಯ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಧಾಕರ್, ‘ಬೌದ್ಧಧರ್ಮದ ಸುಳಿಗೆ ಸಿಕ್ಕ ವಿಶ್ವದ ನಾನಾ ದೇಶಗಳು ಆ ಧರ್ಮಕ್ಕೆ ಮತಾಂತರ ಆಗುತ್ತಿರುವಾಗ ಅದನ್ನು ತಡೆದು ಭಾರತೀಯ ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸಿದ ಕೀರ್ತಿ ಬ್ರಾಹ್ಮಣ ಸಮುದಾಯದ ಆದಿಶಂಕರಾಚಾರ್ಯರಿಗೆ ಸಲ್ಲುತ್ತದೆ’ ಎಂಬ ಸುಧಾಕರ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಈ ಹೇಳಿಕೆಯ ಕುರಿತು ಸ್ಪಷ್ಟೀಕರಣ ನೀಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿವಾದಾತ್ಮಕ ಹೇಳಿಕೆಯ ಕುರಿತು ಮಾತನಾಡಿದ ಕೆ. ಸುಧಾಕರ್, ‘ಸನಾತನ ಧರ್ಮದ ಉಳಿವಿಗಾಗಿ, ಶಂಕರಾಚಾರ್ಯರ ಕೊಡುಗೆಯ ಬಗ್ಗೆ ನಾನು ಉಲ್ಲೇಖಿಸಿದ್ದನ್ನೇ ಬೊಟ್ಟುಮಾಡಿ ತಿರುಚಲಾಗಿದ್ದು, ಬೌದ್ಧ ಧರ್ಮ ಮತ್ತು ಬುದ್ಧನಿಗೆ ಅವಮಾನ ಮಾಡಿದ್ದೇನೆ ಎನ್ನುವ ರೀತಿಯಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿರುವುದು ವಿಷಾಧನೀಯ’ ಎಂದು ಅವರು ತಿಳಿಸಿದ್ದಾರೆ.

Join Whatsapp